
ಸುಳ್ಯದಲ್ಲಿ ನೇಸರ ಮಿನರಲ್ ವಾಟರ್ ಉದ್ಯಮ ನಡೆಸುತ್ತಿದ್ದ ಯುವಕ ಕೊಲ್ಲಮೊಗ್ರ ಗ್ರಾಮದ ಚಾಂತಾಳ ದಿ.ಗಣಪತಿ ಮಾಸ್ತರ್ ರವರ ಪುತ್ರ ಸಚಿನ್ ಚಾಂತಾಳ (38) ಬ್ರೈನ್ ಹೆಮರೇಜ್ ನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಅಡ್ಕಾರ್ ಕೋನಡ್ಕಪದವು ನಲ್ಲಿ ಮಯೂರ್ ಇಂಡಸ್ಟ್ರೀಸ್ (ನೇಸರ ಮಿನರಲ್ ವಾಟರ್ ) ನಡೆಸುತ್ತಿದ್ದರು. ಮೃತರು ಪತ್ನಿ ನಿವೇದಿತಾ, ಪುತ್ರ ನೃಪಾಲ್, ತಾಯಿ ನಿವೃತ್ತ ಶಿಕ್ಷಕಿ ಬೊಳಿಯಮ್ಮ, ಸಹೋದರ ಸವಿನ್, ಅತ್ತಿಗೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.