
ಕನಕಮಜಲು ಗ್ರಾಮದ ಬುಡ್ಲೆಗುತ್ತು ದಿ. ಕೆ.ಬಿ. ಸಂಕಪ್ಪ ಗೌಡರ ಪುತ್ರ ಜಗದೀಶ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.14ರಂದು ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಜಗದೀಶ್ ಅವರು ಕಳೆದ 50 ವರ್ಷದಿಂದ ಮೈಸೂರಿನಲ್ಲಿ ರೂಪಕಲಾ ಡಿಸೈನ್ ಸಂಸ್ಥೆ ನಡೆಸುತ್ತಿದ್ದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ವಿಜಯ, ಪುತ್ರ ಯಶಸ್, ಸಹೋದರರಾದ ಜಯರಾಮ ಗೌಡ, ರಾಮಚಂದ್ರ ಗೌಡ, ದಿನಕರ ಗೌಡ ರಘುರಾಮ ಗೌಡ, ಸೀತಾರಾಮ ಗೌಡ, ಯುರೇಶ್, ಸಹೋದರಿಯರಾದ ಇಂದಿರಾ ಪವಿತ್ರಮಜಲು, ಮೀರಾ ಪ್ರೇಮನಾಥ ಸುಳ್ಯ, ಮೀನಾಕ್ಷಿ ಕೃಷ್ಣಪ್ಪ ಗೌಡ ಸಬಳೂರು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
ಇಂದು ಕನಕಮಜಲಿನ ಬುಡ್ಲೆಗುತ್ತಿನಲ್ಲಿರುವ ಮೃತರ ಸ್ವಂತ ಜಾಗದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.