
ಸೈನಿಕರ ಹುತಾತ್ಮ ದಿನದ ಅಂಗವಾಗಿ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಕರಾಳ ದಿನ ವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸೈನಿಕರ ಫೋಟೋಗಳಿಗೆ ಮೊಂಬತ್ತಿಯನ್ನು ಉರಿಸಿ ಸೈನಿಕರನ್ನು ಸ್ಮರಿಸಿ, ಹುತಾತ್ಮ ಸೈನಿಕರಿಗೆ ಭಾವಪೂರ್ವಕ ಗೌರವ ನಮನ ಸಲ್ಲಿಸಿದರು. ಮತ್ತು ಸೈನಿಕರ ನೆನಪಿನ ಗೌರವದ ಸಲುವಾಗಿ ದೇಶದ ಸೈನಿಕ ವಲಯಕ್ಕೆ ಗೌರವಿಸುವ ಪತ್ರವನ್ನು ಬರೆದು ರವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಮೋಕ್ಷಾ ನಾಯಕ್ , ಭೋದಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.