
ಹಲವು ಸಹಕಾರ ಸಂಘಗಳಿಗೆ ಚುನಾವಣೆ ನಡೆಯುತ್ತಿದ್ದು ಸಹಕಾರಿಗಳಿಗೆ ಚುನಾವಣಾ ಪರ್ವವಾಗಿದೆ. ಚುನಾವಣೆ ಎಂದ ಕೂಡಲೇ ಸಾಂಪ್ರದಾಯಿಕ ಶೈಲಿಯಲ್ಲಿ ಮನೆ ಮನೆ ಭೇಟಿ ಯ ಮತಪ್ರಚಾರ ಮಾಡುವುದು ಸಾಮಾನ್ಯವಾದರೇ ಬಿಳಿನೆಲೆ ಯ ರೈತಾಪಿ ಸಹಕಾರಿ ಅಭಿವೃದ್ಧಿ ರಂಗ ಚುನಾವಣೆಗೆ ಅಧುನಿಕ ತಂತ್ರಗಾರಿಕೆಯ ಸ್ಪರ್ಷ ನೀಡಿದೆ. ತಂತ್ರಜ್ಞಾನ ಬಳಸಿಕೊಂಡು ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದು ಗ್ರಾಮಾಂತರದಲ್ಲಿ ಹೊಸತನವನ್ನು ಪರಿಚಯಿಸಿದ್ದಾರೆ.
ಸಹಕಾರ ಸಂಘದ ಸದಸ್ಯರಿಗೆ ಅಭ್ಯರ್ಥಿಗಳ ಧ್ವನಿಯಲ್ಲಿ ಏಕಕಾಲದಲ್ಲಿ ಕರೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಕುರಿತು ಹಾಗೂ ಮತ ಯಾಚನೆ ನಡೆಸಲಾಗಿದೆ. ಜತೆಗೆ ರಾಜಕೀಯ ತಂತ್ರಗಾರಿಕೆ ತಂಡದ ವಾಟ್ಸಪ್ ಸಂದೇಶ ಗಳು ಸದಸ್ಯರ ಮೊಬೈಲ್ ಗಳಿಗೆ ಏಕಕಾಲದಲ್ಲಿ ಬರುವಂತೆ ಮಾಡಿ ಅಧುನಿಕ ತಂತ್ರಜ್ಞಾನ ಗಳನ್ನು ಬಳಸಿದ್ದು ಗ್ರಾಮಸ್ಥರಲ್ಲಿ ತಂತ್ರಜ್ಞಾನ ದ ಬಳಕೆ ಯ ಕುರಿತು ಹುಬ್ಬೇರುವಂತೆ ಮಾಡಿದ್ದು ಪ್ರಮುಖ ಚರ್ಚಾ ವಿಷಯವಾಗಿದೆ. ಈ ಹೊಸ ಪ್ರಯತ್ನಕ್ಕೆ ಫಲ ಸಿಗಬಹುದುದೇ ಎಂದು ಕಾದು ನೋಡಬೇಕಿದೆ.
ಈ ಕುರಿತು ಮಾತನಾಡಿದ ರೈತಾಪಿ ಸಹಕಾರಿ ಅಭಿವೃದ್ಧಿ ರಂಗ ದ ಸದಸ್ಯ “ಪ್ರದೀಪ್ ಕಳಿಗೆ” ಹಲವು ರಾಜಕೀಯ ಪಕ್ಷ ಗಳಿಗೆ ತಂತ್ರಗಾರಿಕೆ ಮಾಡಿರುವ ಸಂಸ್ಥೆಯ ಮುಖ್ಯಸ್ಥರು ನನಗೆ ತಂತ್ರಜ್ಞಾನದ ಮಾಹಿತಿ ನೀಡಿದ್ದಾರೆ ಹಾಗೂ ಪ್ರಾಯೋಗಿಕವಾಗಿ ಮಾಡುತ್ತಿದ್ದಾರೆ. ಅಲ್ಪಾವಧಿಯಲ್ಲಿ ಎಲ್ಲ ಸದಸ್ಯರನ್ನು ಮುಖತಃ ಭೇಟಿ ಮಾಡುವುದು ಕಷ್ಟ ಸಾಧ್ಯ ಆಗಿರುವಾಗ ತಂತ್ರಜ್ಞಾನ ದ ಮುಖಾಂತರ ಕರೆ ಹಾಗೂ ಸಂದೇಶದ ಮುಖಾಂತರ ತಲುಪುವುದು ಸಾಧ್ಯವಾಗಲಿದೆ. ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕವಲ್ಲದೆಯೂ ಪ್ರಚಾರ ಮಾಡಬಹುದು ಎಂಬ ಯೋಚನೆಯು ಬಂದ ಕಾರಣ ಇದನ್ನು ಮಾಡಲಾಯಿತು. ನಮ್ಮ ಈ ಪ್ರಚಾರದ ಬಗ್ಗೆ ಎಲ್ಲರೂ ಆಶ್ಚರ್ಯದಿಂದ ನೋಡಿದ್ದು ಎಲ್ಲರನ್ನು ತಲುಪುವ ಭರವಸೆ ನಮಗಿದೆ. ಹಿಂದಿನ ಆಡಳಿತ ಮಂಡಳಿಯ ಅವ್ಯವ್ಯಹಾರದ ಕುರಿತು ಸದಸ್ಯರಿಗೆ ಮನದಟ್ಟು ಮಾಡುವುದರ ಜತೆಗೆ ರೈತಾಪಿ ಸಹಕಾರಿ ಅಭಿವೃದ್ಧಿ ರಂಗಕ್ಕೆ ಮತ ನೀಡಲು ಮನವಿ ಮಾಡಲು ಸಹಕಾರಿಯಾಗಲಿದೆ ಎಂದರು.
ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಫೆ. 16 ರಂದು ಚುನಾವಣೆ ನಡೆಯಲಿದೆ.