
ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆ ವತಿಯಿಂದ ಜನ ಸಂಪರ್ಕ ಸಭೆಯನ್ನು ಫೆ. 12 ರಂದು ಆಯೋಜಿಸಯಿತು.
ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರಾದ ಎಂ ಎ ನಟರಾಜ್, ಹಾಗೂ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರುಗಳು ಭಾಗವಹಿಸಿದ್ದರು.
ಸಾರ್ವಜನಿಕ ದೂರು ಸ್ವೀಕಾರ ಮುನ್ನ ಸಭೆಯಲ್ಲಿ ಭಾಗವಹಿಸಿದ್ದ ಸುಳ್ಯ ತಾಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ ಇಲಾಖೆಯ ಅಧಿಕಾರಿಗಳಿಗೆ ಭ್ರಷ್ಟಾಚಾರ ಪಿಡುಗು ಮತ್ತು ನಿರ್ಮೂಲನೆ ಬಗ್ಗೆ ಎಸ್ ಪಿ ರವರಿಂದ ಮಾಹಿತಿ ನೀಡುವ ಕಾರ್ಯ ನಡೆಯಿತು.
ಈ ಸಂಧರ್ಭದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅವರು ‘ನಮಗೆಲ್ಲಾರಿಗೂ ಸರಕಾರಿ ಸೇವೆ ಮಾಡುವ ಭಾಗ್ಯ ಲಭಿಸಿದೆ.ಅದನ್ನು ಸಾರ್ವಜನಿಕರಿಗೆ ಮತ್ತು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುವ ಮೂಲಕ ನಮ್ಮ ಜವಾಬ್ದಾರಿಯನ್ನು ಮೆರೆಯ ಬೇಕಾಗಿದೆ.
ಕಷ್ಟಕ್ಕೆ ಸಮಸ್ಯೆ ಗಳಿಗೆ ಸಿಲುಕಿದ ಜನರು ಅದಕ್ಕೆ ಪರಿಹಾರ ಹುಡುಕಿಕ್ಕೊಂಡು ನಮ್ಮ ಬಳಿ ಬಂದಾಗ ಅವರೊಡನೆ ನಾವುಗಳು ಮಾನವೀಯತೆ ತೋರಿಸಿ ಅವರಲ್ಲಿ ಸಮಸ್ಯೆಗಳ ಬಗ್ಗೆ ಶಾಂತವಾಗಿ ಕೇಳಿ ಕೊಳ್ಳಬೇಕು. ಬಳಿಕ ಕಾನೂನು ರೀತಿಯಲ್ಲಿ ಅದಕ್ಕೆ ಬೇಕಾದ ಮಾಹಿತಿಯನ್ನು ಅವರಿಗೆ ನೀಡಿ ಅವರ ನೋವಿಗೆ ಸ್ಪಂದಿಸ ಬೇಕೇ ವಿನಹ ಅವರನ್ನು ಇನ್ನೂ ಹೆಚ್ಚಿಗೆ ಭಯಭೀತ ಗೊಳಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು. ಅಧಿಕಾರಿಗಳು ಮೂಮೆಂಟ್ ರಿಜಿಸ್ಟರ್ ಮಾಡಬೇಕು ಅಲ್ಲದೇ ಪೋಲಿಸ್ ಇಲಾಖೆಯಲ್ಲಿರುವ ಮಾದರಿಯಲ್ಲಿ ಪಬ್ಲಿಕ್ ವಿಸಿಟರ್ಸ್ ಪುಸ್ತಕ ಅಳವಡಿಕೆ ಮಾಡಬೇಕು ಅಲ್ಲದೆ ಸ್ಥಳೀಯ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಬೇಕು ಅಲ್ಲದೇ ಮಧ್ಯವರ್ತಿಗಳು ಫೈಲ್ ಗಳನ್ನು ಅವರೇ ನೋಡುವಂತಹ ಸ್ಥಿತಿಗೆ ತಂದುಕೊಂಳ್ಳದಿರಿ ಅಲ್ಲದೇ ಇಂತಹ ಸ್ಥಿತಿಗೆ ಅಧಿಕಾರಿಗಳು ಬರಬಾದರು ಎಂದು ಸಲಹೆ ನೀಡಿದರು. ಮುಖ್ಯವಾಗಿ ಕ್ಯಾಶ್ ರಿಜಿಸ್ಟರ್ ಪುಸ್ತಕವನ್ನು ಕಡ್ಡಾಯವಾಗಿ ಅಧಿಕಾರಿಗಳು ಬಳಸಬೇಕು ಬೇಕಾಬಿಟ್ಟಿ ಬರೆದುಕೊಂಡು ಹೋಗಬಾರದು ತಮ್ಮ ಬಳಿ ಇರುವ ಮೊತ್ತವನ್ನು ಮಾತ್ರ ಬರೆಯಬೇಕು ಎಂದು ಹೇಳಿದರು . ಅಲ್ಲದೇ ಲೋಕಾಯುಕ್ತ ಇಲಾಖೆಯ ಪೋಸ್ಟರ್ ಪ್ರತಿ ಕಛೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಅಲ್ಲದೇ ಅಧಿಕಾರಿಗಳು ಸಾರ್ವಜನಿಕರ ಜೊತೆಗೆ ವರ್ತನೆಗಳು ಕೂಡ ಅಧಿಕಾರಿಗಳದ್ದು ಮುಖ್ಯವಾಗಿದ್ದು ಸರಿಯಾಗಿ ನಡೆದುಕೊಳ್ಳಬೇಕು ಹಾಗೂ ಕಾನೂನಿನ ಚೌಕಟ್ಟಿನಲ್ಲಿಯೇ ಅಧಿಕಾರಿಗಳು ಬೆಳೆಯಬೇಕು ಆಡಂಬರದ ಜೀವನಕ್ಕೆ ಬಲಿಪಶುಗಳಾಗಬೇಡಿ ಎಂದು ಖಡಕ್ ಆಗಿ ಸೂಚಿಸಿದರು .
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದ್ದು ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಲೋಕಾಯುಕ್ತ ಅಧಿಕಾರಿಗಳು ಈ ಸಂಧರ್ಭ ದಲ್ಲಿ ತಿಳಿಸಿದರು.
ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ಮಂಜುಳಾ, ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರ ಶೇಖರ್,ಸಿಬ್ಬಂದಿಗಳಾದ ಮಹೇಶ್,ರಾಜಪ್ಪ, ವಿವೇಕ್, ರಾಜ್ ಶೇಖರ್, ದುಂಡಪ್ಪ ವಿನಯ್ ಸಿಂಗ್, ಮೊದಲಾದವರು ಉಪಸ್ಥಿತರಿದ್ದರು.
ಸಭೆಗೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ,ತಾಲೂಕು ಪಂಚಾಯತ್, ನಗರ ಪಂಚಾಯತ್ , ಶಿಕ್ಷಣ ಇಲಾಖೆ , ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.