
ಸುಳ್ಯ ಕಸಬಾಮೂಲೆ ಜೂನಿಯರ್ ಕಾಲೇಜು ಬಳಿ ಸುಳ್ಯ ಶ್ರೀ ಸಂಚಾರಿ ಗುಳಿಗ ಸಾನ್ನಿಧ್ಯದಲ್ಲಿ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವವು ಮಾ.01 ರಂದು ನಡೆಯಲಿದ್ದು ಫೆ.12 ರಂದು ಸಂಕ್ರಮಣ ಪೂಜೆ ಮತ್ತು ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.
ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭಹಾರೈಸಿದರು.
ಪುರೋಹಿತ ಸುರೇಶ್ ಕೇಕುಣ್ಣಾಯ ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಘುನಾಥ ಶೆಟ್ಟಿ, ಉಪಾಧ್ಯಕ್ಷ ನೋಣಪ್ಪ ಕಲ್ಕುದಿ,ಜತೆ ಕಾರ್ಯದರ್ಶಿ ಲವ ಕುಮಾರ್ ಕನ್ನಡ್ಕ,ಕೋಶಾಧಿಕಾರಿ ಮಹಾಲಿಂಗನ್ ಬಾಜರ್ ತೊಟ್ಟಿ,ನಿರ್ದೇಶಕರಾದ ದಿನೇಶ್ ಕುಮಾರ್ ಕೆ.ಸಿ, ಸನತ್ ರಾಮಚಂದ್ರ ,ರಾಮಚಂದ್ರ ಭಟ್ ಮಲ್ಲಿಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಳಿ ಮಾವಂಜಿ ಸ್ವಾಗತಿಸಿ,ವಂದಿಸಿದರು.