
ಮಡಪ್ಪಾಡಿಯ ಶ್ರೀರಾಮ ಭಜನಾ ಮಂಡಳಿಯ ಸಭೆ ಫೆ.07 ರಂದು ನಡೆಯಿತು. ಈ ಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ವಿನ್ಯಾಸ್ ಪಾರೆಮಜಲು, ಕಾರ್ಯದರ್ಶಿಯಾಗಿ ಪ್ರೇಕ್ಷಿತ್ ಬೊಮ್ಮೆಟ್ಟಿ , ಉಪಾಧ್ಯಕ್ಷರಾಗಿ ರಂಜಿತ್ ಬೊಮ್ಮೆಟ್ಟಿ ಹಾಗೂ ಕುಶನ್ ಅಂಬೆಕಲ್ಲು, ಕೋಶಾಧಿಕಾರಿಯಾಗಿ ಚೇತನ್ ಕುಚ್ಚಾಲ, ಜೊತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಬೊಮ್ಮೆಟ್ಟಿ ಹಾಗೂ ಸದಸ್ಯರು ಮತ್ತು ಗೌರವ ಸಲಹೆಗಾರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.