
ಫೆ. 9: ಸಮಾಜ ದಲ್ಲಿ ಹಲವು ಮಂದಿಗೆ ಆಸರೆ ನೀಡಿ ಸಮಾಜದ ಬೆಳವಣಿಗೆಗೆ ಅದ್ಭುತ ಕೆಲಸ ಮಾಡಿದವರು ಜನ ಮಾನಸದಲ್ಲಿ ಎಂದೆಂದೂ ಜೀವಂತವಾಗಿರುತ್ತಾರೆ. ಜಿ.ಎಲ್. ಆಚಾರ್ಯ ಅಂಥ ಮಹಾನ್ ವ್ಯಕ್ತಿ ಎಂದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಸ್ವರ್ಣ ಉದ್ಯಮಿ, ಸಮಾಜ ಸೇವಕರೂ ಆಗಿದ್ದಂತಹ ಜಿ.ಎಲ್. ಆಚಾರ್ಯ ಅವರ ಶತಮಾನದ ಸ್ಥರಣೆ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬದ್ದತೆ ಯಿಂದ ಕೆಲಸ ಮಾಡಿರುವ ಜಿ.ಎಲ್.ಆಚಾರ್ಯ ಅವರು ಒಬ್ಬ ಆದರ್ಶ ವ್ಯಕ್ತಿ ಎಂದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನುಡಿನಮನ ಸಲ್ಲಿಸಿದರು. ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಟ್ ಟಿ.ರಾಮಕುಂಜ ಸಂಸ್ಕರಣ ಭಾಷಣ ಮಾಡಿದರು. ಶತಮಾನದ ನೆನಪಲ್ಲಿ ಕಿರುಹೊತ್ತಗೆ ‘ಬಂಗಾರ’ವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಕೃತಿ ಪರಿಚಯಿಸಿದರು. ರಾಜಿ ಬಲರಾಮ ಆಚಾರ್ಯ ಉಪಸ್ಥಿತರಿದ್ದರು.
ವಿಶ್ರಾಂತ ಪ್ರಾಧ್ಯಾಪಕ ಡಾ। ಶ್ರೀಪತಿ ಕಲ್ಲೂರಾಯ ಕಾರ್ಯ ಕ್ರಮ ನಿರೂಪಿಸಿದರು. ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಯ ಬಲರಾಮ ಆಚಾರ್ಯ ಸ್ವಾಗತಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.
ಆಚಾರ್ಯ ರತ್ನಾಕರ ವಿ.ವಿಠಲ ರಾಮಮೂರ್ತಿ ಚೆನ್ನೈ ಅವರು ವಿಪ್ರಹಾರ್ ಬಳಗ ಚೆನ್ನೈಕರ್ನಾಟಕ ಶಾಸ್ತ್ರೀಯವಾದ್ಯ ಸಂಗೀತ ಪ್ರಸ್ತುತ ಪಡಿಸಿದರು. ವಯಲಿನ್‌ನಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ, ಮೆಂಡೋಲಿನ್‌ನಲ್ಲಿ ವಿದ್ವಾನ್ ವಿಶ್ವಾಸ್ ಹರಿ ಚೆನ್ನೈ, ಕೀಬೋರ್ಡ್ ನಲ್ಲಿ ಪ್ರಣವ್ ಆರ್.ವಿ.ಚೆನ್ನೈ, ತಾಳವಾದ್ಯ ದಲ್ಲಿ ವಿದ್ವಾನ್ ಹರಿಹರನ್ ಸುಂದರ್ ರಾಮನ್ ಚೆನ್ನೈ ಸಹಕರಿಸಿದರು.