
ದ.ಕ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮಹೇಶ್ ನಡುತೋಟರವರು ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಚುನಾಯಿತರಾಗಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ಉದ್ಯಮಿಯಾಗಿ ಕಳೆದ 15 ವರುಷದಿಂದ ನೆಲೆಸಿರುವ ಇವರು ಮಂಗಳೂರು ಒಕ್ಕಲಿಗರ ಗೌಡರ ಸೇವಾ ಸಂಘ ಯುವ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯ ನಿರ್ದೇಶಕರಾಗಿಯೂ ದುಡಿದಿದ್ದಾರೆ.
ಇವರು ಸುಬ್ರಹ್ಮಣ್ಯದ ಬಿಳಿನೆಲೆಯ ನಡುತೋಟ ದಿ. ಚೆನ್ನಕೇಶವ ಗೌಡ ಮತ್ತು ರುಕ್ಕಿಣಿ ದಂಪತಿಗಳ ಪುತ್ರ.
