
ಗುತ್ತಿಗಾರಿನಲ್ಲಿ ಫೆ.09 ರಂದು ಐ ಎಫ್ ಸಿ ರನ್ಸ್ ಮ್ಯಾರಥಾನ್ 2025 (IFC Runs Marathon) ಹಮ್ಮಿಕೊಂಡಿದ್ದು ಈ ಮಹತ್ವದ ಕಾರ್ಯಕ್ರಮದ ಆಹ್ವಾನ ಪತ್ರ ಬಿಡುಗಡೆ ಇಂದು ಗುತ್ತಿಗಾರಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಮುಳಿಯ ಸಾತ್ವಿಕ್, ಉಪಾಧ್ಯಕ್ಷರು ಕೌಶಿಕ್ ಶ್ಯಾಮ್, ಸುಮುಖ್ ರಾಮ್, ಶ್ರಿಶರಣ್ ಮೊಗ್ರ, ಮೋನಿಶ್ ಬಾಕಿಲ, ನಿರ್ದೇಶಕರು ರಾಕೇಶ್ ಮೆಟ್ಟಿನಡ್ಕ, ಅಮಿತ್ ನಾಯಕ್, ಕಾರ್ಯಕ್ರಮದ ಸಂಯೋಜಕ ಚರಣ್ ಕೊಂಬೊಟ್ಟು ಹಾಗೂ ಸದಸ್ಯರಾದ ವೈದೀಶ್ ಬಾಕಿಲ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. ಮ್ಯಾರಥಾನ್ ದೈಹಿಕ ಆರೋಗ್ಯ ಹಾಗೂ ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಫೆಬ್ರವರಿ 9, 2025ರಂದು ನಡೆಯಲಿರುವ ಈ ಮ್ಯಾರಥಾನ್‌ಗೆ ಅಪಾರ ಸ್ಪಂದನೆ ಸಿಗಲಿದೆ ಎಂಬ ನಿರೀಕ್ಷೆಯಿದೆ ಎಂದು ಆಯೋಜಕರ ತಂಡ ತಿಳಿಸಿದೆ.