
ಭಾರತೀಯ ಸ್ಕೌಟ್ ಮತ್ತು ಗೈಡ್ಸ್, ರಾಷ್ಟ್ರೀಯ ಸಂಸ್ಥೆ ಮತ್ತು ರಾಜ್ಯ ಸಂಸ್ಥೆ ತಮಿಳುನಾಡು ಇವುಗಳ ಸಹಯೋಗದಲ್ಲಿ ಜ.28 ರಿಂದ ಫೆ.03 ರವರೆಗೆ ತಮಿಳುನಾಡಿನ ಸಿಪ್ ಕಾಟ್ ಇಂಡಸ್ಟ್ರೀಯಲ್ ಪಾರ್ಕ್, ಮುನಪ್ಪರೈ, ತಿರಿಚಿರೆಪಳ್ಳಿ ಎಂಬಲ್ಲಿ 75ನೇ ವರ್ಷಾಚರಣೆ ಅಂಗವಾಗಿ ಸ್ಕೌಟ್ ಗೈಡ್ಸ್ ವಿಶೇಷ ಡೈಮಂಡ್ ಜುಬಿಲಿ ಜಾಂಬೂರಿ ಯನ್ನು ಆಯೋಜಿಸಲಾಗಿದ್ದು, ಈ ಜಾಂಬೂರಿ ಯಲ್ಲಿ ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯಿಂದ ಪುನೀತ್ ರಾಜ್, ತೀರ್ಥೇಶ್, ಶಾಶ್ವತ್.ಕೆ.ಯಲ್, ಹವೀನ್.ಬಿ.ಯನ್, ಅನ್ವಯ್ ಹಾಗೂ ಹಿತೇಶ್.ಕೆ.ಯಸ್ ಭಾಗವಹಿಸಿದ್ದು, ಪ್ರಶಸ್ತಿ ಪತ್ರ ಪಡೆದುಕೊಂಡರು.
ಇವರೊಂದಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಗೌಡ ರವರು ತೆರಳಿದ್ದರು.