
ಕೆವಿಜಿ ರೂರಲ್ ಹೆಲ್ತ್ ಕೇರ್ ಟ್ರೈನಿಂಗ್ ಸೆಂಟರ್ ಮತ್ತು ಇಂಟಿಗ್ರೇಟೆಡ್ ಆಯುರ್ವೇದ ಆಸ್ಪತ್ರೆ, ಕೆವಿಜಿ ನರ್ಸಿಂಗ್ ಸೈನ್ಸ್ ಸೋಣಂಗೇರಿ, ಸುಳ್ಯ ಇಲ್ಲಿ ಫೆಬ್ರವರಿ 7 ರಂದು ಪುರೋಹಿತ ಶ್ರೀವರ ಪಾಂಗಣ್ಣಾಯ ಇವರ ವೈದಿಕತ್ವದಲ್ಲಿ ಗಣಪತಿ ಹವನ ವಿದ್ಯುಕ್ತವಾಗಿ ನೆರವೇರಿತು.
ಈ ಸಮಾರಂಭದಲ್ಲಿ ಡಾ. ಕೆ. ವಿ ಚಿದಾನಂದ, ಅಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಶ್ರೀಮತಿ ಶೋಭಾ ಚಿದಾನಂದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಮತಿ, ಕೆವಿಜಿ ನರ್ಸಿಂಗ್ ಸೈನ್ಸ್ ನ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮ ಬಿ. ಎಮ್., ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹೆಲ್ತ್ ಕೇರ್ ಟ್ರೈನಿಂಗ್ ಸೆಂಟರ್ ಮತ್ತು ಇಂಟಿಗ್ರೇಟೆಡ್ ಆಯುರ್ವೇದ ಆಸ್ಪತ್ರೆ ಸೋಣಂಗೇರಿಯಲ್ಲಿ ಇಂದಿನಿಂದ ಹೊರ ರೋಗಿ ವಿಭಾಗದಲ್ಲಿ ವೈದ್ಯರುಗಳು ವೈದ್ಯಕೀಯ ಸೇವೆಗೆ ಹಾಗೂ ಪಂಚಕರ್ಮ ಚಿಕಿತ್ಸೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5:00 ವರೆಗೆ ಸೇವೆಗೆ ಲಭ್ಯರಿರುತ್ತಾರೆ