ಜನವರಿ 29 ರಂದು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆಯ ವತಿಯಿಂದ ದಶ ಸಂಭ್ರಮದ ಕಾರ್ಯಕ್ರಮದ ಅಂಗವಾಗಿ ವಾತ್ಸಲ್ಯ ಕಾರ್ಯಕ್ರಮದ ಪ್ರಯುಕ್ತ ಬೆಳ್ಳಾರೆ ಗ್ರಾಮದ ದರ್ಕಾಸ್ತು ಬಡ ಮಹಿಳೆ ಲಲಿತಾ ರೈಯವರ ವಿಕಲಚೇತನ ಮಗಳಾದ ಶೈಲಿ ರೈ ಇವರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು, ಕಾರ್ಯದರ್ಶಿ ಶೋಭಾ ಕುರುಂಬುಡೇಲು, ಕೋಶಾಧಿಕಾರಿ ಕುಸುಮ ಕುರುಂಬುಡೇಲು, ಪದಾಧಿಕಾರಿಗಳಾದ ಶಕೀಲಾ ವೈ ಶೆಟ್ಟಿ ಉಮಿಕ್ಕಳ, ಸುಶೀಲ ಬಸ್ತಿಪಡ್ಪು, ಶೋಭನ ಪನ್ನೆ, ನಂದಿನಿ ಉಮಿಕ್ಕಳ, ಶಶಿಕಲಾ ಉಮಿಕ್ಕಳ ಉಪಸ್ಥಿತರಿದ್ದರು.
- Saturday
- February 1st, 2025