Ad Widget

ಪಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಶಾಸ್ತ್ರಿ, ಉಪಾಧ್ಯಕ್ಷರಾಗಿ ಸದಾನಂದ ಕಾರ್ಜ ಅವಿರೋಧ ಆಯ್ಕೆ

. . . . . . . . .

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು 12 ಸ್ಥಾನದಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

. . . . . . .

ಜ.30 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಅಧ್ಯಕ್ಷರಾಗಿ ಚಂದ್ರಶೇಖರ ಶಾಸ್ತ್ರಿ ಸಿ ರವರು ಮತ್ತು ಉಪಾಧ್ಯಕ್ಷರಾಗಿ ಸದಾನಂದ ಕಾರ್ಜ ಅವಿರೋಧ ಆಯ್ಕೆಯಾದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ ಎನ್ ನಾಯರ್ ಕೆರೆ, ಚಿನ್ನಪ್ಪ ಗೌಡ ಚೊಟ್ಟೆಮಜಲು, ವಾಸುದೇವ ಕೆರೆಕ್ಕೋಡಿ, ಅರುಣ್ ರೈ ಗೆಜ್ಜೆ, ಮುದರ ಐವತ್ತೊಕ್ಕು, ವಾಚಣ್ಣ ಕೆರೆಮೂಲೆ, ತಿಮ್ಮಪ್ಪ ಗೌಡ ಕೂತ್ಕುಂಜ, ಶ್ರೀಮತಿ ವನಿತಾ ಸುರೇಶ್ ಅತ್ಯಡ್ಕ, ಶ್ರೀಮತಿ ಬೇಬಿ ಭಾಸ್ಕರ ಕಟ್ಟ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರು, ಹಾಗೂ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಮುಖಂಡರು ಕಾರ್ಯಕರ್ತರು, ಪಂಜ ಸೊಸೈಟಿ ಮಾಜಿ ಅಧ್ಯಕ್ಷರು, ನಿರ್ದೇಶಕರು, ಪಂಜ ಗ್ರಾ. ಪಂ ಅಧ್ಯಕ್ಷರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಚುನಾವಣಾಧಿಕಾರಿಯಾಗಿ ಶಿವಲಿಂಗಯ್ಯ ನವರು ಹಾಜರಿದ್ದರು. ವಲಯ ಮೇಲ್ವಿಚಾರಕರಾದ ಪ್ರದೀಪ್ ಕುಮಾರ್ ಹಾಗೂ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading