Ad Widget

ಕೆಲವರ ಮಾತ್ರ ಸ್ವತ್ತಾಗಿದ್ದ ಶಿಕ್ಷಣ,ಕಾನೂನು,ಜಮೀನು ಸರ್ವರ ಹಕ್ಕು ಮತ್ತು ಕಡ್ಡಾಯವಾಗುವಂತೆ ಮಾಡಿದ್ದೇ ಅಂಬೇಡ್ಕರ್ ಬರೆದ ಸಂವಿದಾನದ ಶಕ್ತಿ- ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ.

. . . . . . . . .

ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ವಿಧ್ಯಾರ್ಥಿಗಳಿಗೆ ಕಾನೂನು ಮತ್ತು ಸಂವಿದಾನದ ಅರಿವು ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಖ್ಯಾತ ನ್ಯಾಯವಾದಿಗಳಾದ ಶ್ರೀ ದಿನೇಶ್ ಹೆಗ್ಡೆ ಉಳೆಪಾಡಿ ಇವರು ಹಿಂದೆ ಶಿಕ್ಷಣ,ಜಮೀನು,ಕಾನೂನು ಇವೆಲ್ಲಾ ಕೆಲವರ ಮಾತ್ರ ಅಥವಾ ಆರ್ಥಿಕವಾಗಿ ಬಲಾಡ್ಯರಾಗಿದ್ದವರ ಸ್ವತ್ತಾಗಿತ್ತು, ಇವತ್ತು 16 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ಕಾನೂನು ರಚನೆಯಾಗಿದೆ.

. . . . . . .

ಆರ್ಥಿಕವಾಗಿ ಬಲಾಡ್ಯರಾಗಿದ್ದವರಲ್ಲಿ ಮಾತ್ರ ಇದ್ದ ಜಮೀನು ದಿವಂಗತ ಇಂದಿರಾಗಾಂಧಿಯವರ ಮೂಲಕ ಒಂದು ಹಂತದವರೆಗೆ ಉಳುವವನೇ ಹೊಲದೊಡೆಯನಾಗುವ ಮೂಲಕ ಹೆಚ್ಚಿನವರಿಗೆ ಜಮೀನು ದೊರಕುವಂತಾಯಿತು .ಯಾವನೇ ಒಬ್ಬ ವ್ಯಕ್ತಿ ತನಗೆ ಅನ್ಯಾಯವಾದರೆ ಕೇವಲ ಒಂದು ಪತ್ರ ಬರೆಯುವುದರ ಮುಖೇನೆ ಹೈಕೋರ್ಟ್, ಸುಂಪ್ರೀ ಕೋರ್ಟು ಗಳು ಆ ವ್ಯಕ್ತಿಯ ಬಳಿಗೇ ಬರುವ ವ್ಯವಸ್ತೆಯಿದೆ. ಇದಕ್ಕೆಲ್ಲಾ ಕಾರಣವಾಗಿದ್ದೇ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ನಮ್ಮ ಸಂವಿದಾನ ಆದರೆ, ಇವತ್ತು ಇದರ ಅರಿವಿನ ಕೊರತೆ ನಮ್ಮ ಸಮಾಜದಲ್ಲಿ ಹೆಚ್ಚಾಗಿದೆ. ಆದರೂ ಇಂತಹಾ ಕಾರ್ಯಕ್ರಮಗಳ ಮೂಲಕ ಮುಂದಿನ ತಲೆಮಾರುಗಳಾದ ಈ ವಿಧ್ಯಾರ್ಥಿಗಳು ಅದರ ಮಾಹಿತಿಗಳನ್ನು ಅರಿತು ಬಾಳುವಂತಾಗಲಿ ಎಂದು ಹಾರೈಸಿದರು. ವಿಧ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಎರ್ಪಡಿಸಲಾಗಿತ್ತು.

ಪ್ರಜಾಧ್ವನಿಯ ಗೌರವ ಸದಸ್ಯರು ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಶ್ರೀ ಕೆ.ಪಿ ಜಾನಿ ಇವರು ಪ್ರಸ್ತಾವಿಕ ಮಾತುಗಳನ್ನಾಡಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಮನದಾಳದ ಆಶಯವನ್ನು ಇಡಿ ಜಗತ್ತು ಸುತ್ತಾಡಿ ಎಲ್ಲಾ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಾಯನ ಮಾಡಿ ಅಕ್ಷರಗಳ ಮೂಲಕ ಜೋಡಿಸಿ ಒಂದು ಪುಸ್ತಕದ ರೂಪದಲ್ಲಿ ಜಗತ್ತಿನ ಶ್ರೇಷ್ಠ ಸಂವಿದಾನವನ್ನಾಗಿ ಡಾಕ್ಟರ್ ಬಾಬಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಅರ್ಪಿಸಿದರು.ಅದರಂತೆ ನಾವೆಲ್ಲಾ ತಾಯಿ ಭಾರತಿಯ ಮಕ್ಕಳು ಎನ್ನುವ ನೆಲೆಯಲ್ಲಿ ಒಂದಾಗಿ ಬಾಳುವುದರ ಅಗತ್ಯ ಮತ್ತು ಮಹತ್ವದ ಬಗ್ಗೆ ಮಾತನಾಡಿ ಪ್ರಜಾಧ್ವನಿ ಕರ್ನಾಟಕ ಈ ಆಶಯದೊಂದಿಗೆ ಹುಟ್ಟಿಕೊಂಡ ಸಂಘಟನೆ ಈ ಆಶಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ವರೂ, ವಿಶೇಷವಾಗಿ ವಿಧ್ಯಾರ್ಥಿಗಳು ಪ್ರಜಾಧ್ವನಿಯೊಂದಿಗೆ ಕೈಜೋಡಿಸಬಹುದು ಎಂದು ಕರೆಕೊಟ್ಟರು. ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಇದರ ಮುಖ್ಯೋಪಾಧ್ಯಾಯರಾದ ಶ್ರೀ ಸೋಮಶೇಖರ್. ಪಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣವನ್ನು ಮಾಡಿದರು.ಹಾಗೇ ಪ್ರಜಾಧ್ವನಿ ಕರ್ನಾಟಕದ ಸಂಚಾಲಕರಾದ ಶ್ರೀ ಗೋಪಾಲ್ ಪೆರಾಜೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಕಾಂತಿ ಬಿ.ಎಸ್ ಅವರು ಸ್ವಾಗತಿಸಿ ಪ್ರಧ್ಯಾಪಕರಾದ ಶ್ರೀ ಸುರೇಶ್ ವಾಗ್ಲೆ ಇವರು ವಂದಿಸಿದರು.ನೆಹರೂ ಸ್ಮಾರಕ ಪದವಿಪೂರ್ವ ಕಾಲೇಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಪದ್ಮಕುಮಾರ್ ಇವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರಜಾಧ್ವನಿ ಕರ್ನಾಟಕ ತಂಡದಿಂದ ವಿಧ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಪ್ರಜಾಧ್ವನಿ ಕರ್ನಾಟಕ ಇದರ ಗೌರವ ಸದಸ್ಯರು ಸುಳ್ಯ ನಗರಪಂಚಾಯತ್ ಸದಸ್ಯರು ಆದ ಶ್ರೀ ಉಮ್ಮರ್ ಕೆ.ಎಸ್,ರಾಜು ಪಂಡಿತ್ ,ಸಂಪಾಜೆ ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಲೆಸ್ಸಿ ಮೊನಾಲಿಸ,ಸಂಪಾಜೆಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಮತಿ ಪ್ರಮಿಳಾ ಪೆಲ್ತಡ್ಕ,ಐ.ಎನ್.ಟಿ.ಯು.ಸಿ ತಾಲೂಕು ಅಧ್ಯಕ್ಷರಾದ ಶ್ರೀ ಶಾಫಿ ಕುತ್ತಮೊಟ್ಟೆ, ಮಹೇಶ್ ಬೆಳ್ಳಾರ್ಕರ್, ಕೇಶವ ಪಾಟಾಳಿ, ಭರತ್ ಕುಕ್ಕುಜಡ್ಕ , ಸಾಹುಕಾರ್ ಅಶ್ರಫ್ , ದಿವಾಕರ್ ಪೈ,ಶ್ರೀಮತಿ ಲಲನ ಕೆ.ಆರ್, ಸಿಲ್ವೆಸ್ಟರ್ ಡಿಸೋಜ, ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಸಿಬ್ಬಂಧಿವರ್ಗ,ಮತ್ತಿತರರು ಉಪಸ್ತಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading