Ad Widget

ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ. ವ್ಯಕ್ತಿತ್ವ ವಿಕಸನಕ್ಕೆ ಕಾರಣವಾದ ಜೀವಸತ್ವ ಶಿಕ್ಷಣ – ಪೂವಪ್ಪ ಕಣಿಯೂರು

. . . . . . . . .

ಶಿಕ್ಷಣವೆಂದರೆ ಶೀಲರಚನೆ ಜ್ಞಾನವಿವೇಕವಾಗಿ ಪರಿವರ್ತಿತವಾಗಿ ಮಾನವೀಯ ಮೌಲ್ಯಗಳನ್ನು ತಂದು ಕೊಡುತ್ತದೆ. ಅವರು ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವರ್ತಮಾನದಲ್ಲಿ ಹಣ ಸಂಪಾದನೆ ಮಾಡುವುದಕ್ಕಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬಾರದು. ಮಾತೃಭಾಷೆಯಲ್ಲಿ ಮಾತ್ರ ನಾವು ಮೌಲ್ಯಯುತವಾದ ಶೀಲಯುಕ್ತವಾದ ಶಿಕ್ಷಣವನ್ನು ಪಡೆಯಲು ಸಾಧ್ಯ. ಸಾಧನೆಗೆ ಭಾಷೆ ತೊಡಕಾಗುವುದಿಲ್ಲವೆಂದು ಅಭಿಪ್ರಾಯಪಟ್ಟರು.

. . . . . . .

ಜ್ಯೋತಿ ವಿದ್ಯಾಸಂಘ (ರಿ) ಪೆರಾಜೆ ಪ್ರಣವ ಫೌಂಡೇಶನ್ (ರಿ) ಬೆಂಗಳೂರು, ಜ್ಯೋತಿ ಪ್ರೌಢಶಾಲೆ ಇದರ ಆಶ್ರಯದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬಹಳ ಅದ್ಧೂರಿಯಿಂದ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ರಾಕೇಶ್ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಎನ್ ಎ ಜ್ಞಾನೇಶ್, ಶ್ರೀಮತಿ ಚಂದ್ರಕಲಾ ಬಳ್ಳಡ್ಕ , ಶ್ರೀ ಡಿ. ಪಿ ಪೂವಪ್ಪ ಮಾಸ್ತರ್, ಶ್ರೀಮತಿ ಶಕುಂತಳ ಯು. ರೈ, ಶ್ರೀ ಸುರೇಶ್ ಪೆರುಮುಂಡ, ಶ್ರೀ ಜಿತೇಂದ್ರ ನಿಡ್ಯಮಲೆ , ಶ್ರೀ ಚಂದ್ರಶೇಖರ ಜಿ. ವಿ , ಶ್ರೀ ಲೋಕನಾಥ ಅಮೆಚೂರು, ಶ್ರೀ ದೊಡ್ಡಣ್ಣ ಬರೆಮೇಲು, ಶ್ರೀ ಉದಯಚಂದ್ರ ಕುಂಬಳಚೇರಿ, ಶ್ರೀ ರಕ್ಷಿತ್ ಕೆ. ಪಿ, ಕು. ನೇತ್ರಾವತಿ ಎನ್, ನಾಗರಾಜ್ ಜಿ. ಆರ್ , ಜಯರಾಮ ಕರ್ದಡ್ಕ, ಶ್ರೀ ಮಹೇಶ್ ಕುಮಾರ್ ಮೇನಾಲ ಶಾಲಾ ನಾಯಕ ಯಶ್ವಿನ್ ಕೆ. ಸಿ ಉಪಸ್ಥಿತರಿದ್ದರು. ಸಮಾರಂಭದ ಮೊದಲು ಧ್ವಜಾರೋಹಣವನ್ನು ಎನ್ ಎ. ರಾಮಚಂದ್ರ ನೆರವೇರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಎ ವೇಣುಗೋಪಾಲ ಕೊಯಿಂಗಾಜೆ, ಶ್ರೀ ಎಂ ಆರ್ ನರೇಂದ್ರ ಮುಂಡೋಡಿ, ಪೂವಪ್ಪ ಮಾಸ್ತರ್ ದೊಡ್ಡಡ್ಕ, ಶ್ರೀಮತಿ ಶಕುಂತಳ ಯು ರೈ, ಶ್ರೀ ಎನ್ ಎ ರಾಮಚಂದ್ರ ಹಾಗೂ ಪೂವಪ್ಪ ಕಣಿಯೂರು ಇವರುಗಳನ್ನು ಜ್ಯೋತಿ ವಿಧ್ಯಾಸಂಘ ಮತ್ತು ಪ್ರಣವ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಸಚಿನ್ ಕೆ, ರಕ್ಷಾ ಕೆ. ಎ, ವೃಷಾಂಕ್ ಎನ್. ಎ ವಿದ್ಯಾಸಂಘದ ಸಂಚಾಲಕ ಮಹೇಶ್ ಕುಮಾರ್ ಮೇನಾಲ ಸ್ವಾಗತಿಸಿ ಸಹಶಿಕ್ಷಕಿ ವೀಣಾ ಜಯಪ್ರಕಾಶ್ ವಂದಿಸಿದರು. ಅಶೋಕ್ ಪೀಚೆ ಚಂದ್ರಮತಿ ಕುಂಬಳಚೇರಿ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ – ಸಂಗೀತ – ಕಲಾಕೇಂದ್ರ ಸುಳ್ಯ ಮತ್ತು ಜ್ಯೋತಿ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading