
ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇಲ್ಲಿ ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ) ವ್ಯಾಸಂಗ ಮಾಡುತ್ತಿದ್ದ ವಿದುಷಿ ಚೈತನ್ಯ ಕೋಟೆ ಅವರು ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ವಿ.ವಿಗೆ ಪ್ರಥಮ ರ‍್ಯಾಂಕ್ ಗಳಿಸಿ ಅವಳಿ ಚಿನ್ನದ ಪದಕ ಪಡೆದಿದ್ದಾರೆ.
ಇವರು ವಿಶ್ವವಿದ್ಯಾಲಯದ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ನವ ದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶ್ರೀನಿವಾಸ್ ವರಖೇಡಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್.ವಿ.ಬೆಟ್ಟಕೋಟೆ ಉಪಸ್ಥಿತರಿದ್ದರು.ಚೈತನ್ಯ ಕೋಟೆ ಅವರು ವಿದುಷಿ ಅಂಶುಮಾಲ ಉಬರಡ್ಕ ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಕುಡ್ಕಾಡಿ ವಿಶ್ವನಾಥ ರೈ ಇವರ ಶಿಷ್ಯೆ.ಕುಕ್ಕೆ ಸುಬ್ರಹ್ಮಣ್ಯದ ಬೂದಿಪಳ್ಳ ಭಾಸ್ಕರ ಕೋಟೆ ಮತ್ತು ವೀಣಾ ಕೋಟೆ ದಂಪತಿಗಳ ಪುತ್ರಿ ಹಾಗೂ ತಿರುಮಲ ಭಟ್ ಅವರ ಪತ್ನಿ.sಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ.