
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥದಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕ್ರೀಡಾಕೂಟವನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ಇದರ ಅಧ್ಯಕ್ಷರಾದ ಹಿತೇಶ್ ಪಂಜದಬೈಲು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ SDMC ಅಧ್ಯಕ್ಷರಾದ ಮಧುಚಂದ್ರ ವಹಿಸಿದರು.
ಪಂಜ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ವಿಜಯಲಕ್ಷ್ಮಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅನುರಾಜ್ ಕಕ್ಯಾನ, ಮುಖ್ಯಶಿಕ್ಷಕಿ ಗಿರಿಜ, ಹಾಗೂ ಶಾಲಾ ಶಿಕ್ಷಕರು,ಹಳೆವಿದ್ಯಾರ್ಥಿ,ಪೋಷಕರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ವಿದ್ಯಾಶ್ರೀ ಸ್ವಾಗತಿಸಿ,ಮಂಜುಳ ಅಶೋಕ ನಾಗತೀರ್ಥ ಧನ್ಯವಾದಗೈದರು.