
ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧೀರೇನ್ ಪರಮಲೆ ಇವರ ಸಹಕಾರದೊಂದಿಗೆ ರತನ್ ರೈ, ಸೀನಿಯರ್ ಹೆಚ್. ಆರ್. ಮ್ಯಾನೇಜರ್ ” ಶರ್ವಿನ್ ವಿಲಿಯಂ “ವಾಲ್ಸ್ಪರ್ ಇಂಡಿಯಾ ಕೋಟಿಂಗ್ ಕಾರ್ಪೊರೇಷನ್ ಪ್ರೈವೆಟ್ ಲಿಮಿಟೆಡ್ & ಸುರೇಶ್ ರಾಬರ್ಟ್ ಅಧ್ಯಕ್ಷರು ರೋಟರಿ. ಜೆ. ಪಿ. ನಗರ ಬೆಂಗಳೂರು ಇವರ ಯೋಜನೆ 2024-25 ರನ್ವಯ ನೀಡಿದ ಕಂಪ್ಯೂಟರ್ 3, ಕಂಪ್ಯೂಟರ್ ಟೇಬಲ್ 5, LED ಟಿವಿ 1, ವಾಟರ್ ಪ್ಯೂರಿಫೈಯರ್ ಟ್ಯಾಂಕಿ 1, ನಲಿ ಕಲಿ ಮೇಜು 5, ನಲಿಕಲಿ ಚೈರ್ 30, ಗೋದ್ರೆಜ್ 5, ಬೆಂಚು – ಡೆಸ್ಕ್ -12 ಇವುಗಳ ಉದ್ಘಾಟನೆ ಹಸ್ತಾಂತರ ಹಾಗೂ ಸನ್ಮಾನ ಕಾರ್ಯಕ್ರಮ ಜ.17ರಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ,ಪೋಷಕರು ಹಾಗೂ ವಿದ್ಯಾ ಅಭಿಮಾನಿಗಳ ಸಹಕಾರದೊಂದಿಗೆ ನಡೆಯಿತು.
ನೀರಿನ ಟ್ಯಾಂಕಿ ಉದ್ಘಾಟನೆಯನ್ನು ಸುರೇಶ್ ರಾಬರ್ಟ್ ಅಧ್ಯಕ್ಷರು, ರೋಟರಿ. ಜೆ. ಪಿ. ನಗರ ಬೆಂಗಳೂರು ಇವರು ನಡೆಸಿಕೊಟ್ಟರು. ಜಿಲ್ಲಾ ಪಂಚಾಯತ್ ದುರಸ್ತಿ ಅನುದಾನ ₹2 ಲಕ್ಷ ದಲ್ಲಿ ಕೊಠಡಿಯೊಂದನ್ನು ದುರಸ್ತಿಗೊಳಿಸಿ ಕಂಪ್ಯೂಟರ್ ಕೊಠಡಿಯಾಗಿ ಪರಿವರ್ತಿಸಿದ್ದು ಇದನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಿಜಯಕುಮಾರ್ ಚಾ ರ್ಮತ, ಹಾಗೂ ಹರೀಶ್ ಕೊಯಿಲ ಜಂಟಿಯಾಗಿ ಉದ್ಘಾಟಿಸಿದರು. ಬಳಿಕ ಧೀರೇನ್ ಪರಮಲೆ, ರತನ್ ರೈ ಹಾಗೂ ಸುರೇಶ್ ರಾಬರ್ಟ್ ಕಂಪ್ಯೂಟರ್, LED ಟಿವಿ, ಕಂಪ್ಯೂಟರ್, ಟಿವಿ ಆನ್ ಮಾಡುವ ಮೂಲಕ ಉದ್ಘಾಟಿಸಿದರು. “ಎಸ್ ಡಿ ಎಮ್ ಸಿ” ಅಧ್ಯಕ್ಷರು “ನಲಿ ಕಲಿ ಮಕ್ಕಳ”ನ್ನು” ನಲಿ ಕಲಿ ಚೇರ್ & ಮೇಜನ್ನು ಹಸ್ತಾಂತರಿಸಿದರು. “ಗೋದ್ರೆಜ್” ಗೆ ದಾಖಲೆಗಳನ್ನು ಇಡುವ ಮೂಲಕ ಗೋದ್ರೆಜ್ ಉದ್ಘಾಟನೆ ಯನ್ನು ಸಿ ಆರ್ ಪಿ ಕುಶಾಲಪ್ಪ ಟಿ. ನೆರವೇರಿಸಿದರು.
ಸಭಾ ಕಾರ್ಯಕ್ರಮದ ಅಂಗವಾಗಿ ಕುಮಾರಿ ” ಚೈತನ್ಯ ಮತ್ತು ಅಮೃತ”ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರ್ವಹಣೆಯನ್ನು ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವನಜಾಕ್ಷಿ ಉತ್ತಮವಾಗಿ ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಪಾರೆಪ್ಪಾ ಡಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿ ಧೀರೇನ್ ಪರಮಲೆ ಸಿಇಓ ಲೀಡರ್ಷಿಪ್ ಎಕ್ಸಲೆನ್ಸ್ ಸೊಲ್ಯೂಷನ್ ಪ್ರೈವೆಟ್. ಲಿಮಿಟೆಡ್ ಬೆಂಗಳೂರು ಇವರು ರತನ್ ರೈ & ಸುರೇಶ್ ರಾಬರ್ಟ್ ಇವರ ಮುಖಾಂತರ ನಮ್ಮ ಗ್ರಾಮೀಣ ಶಾಲೆಗೆ ಈ ಎಲ್ಲಾ ಉಪಕರಣಗಳನ್ನು ಹೇಗೆ ತರಲು ಸಾಧ್ಯವಾಯಿತು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಧೀರನ್ ಪರಮಲೆ, ರತನ್ ರೈ, ಸುರೇಶ್ ರಾಬರ್ಟ್ ಇವರುಗಳನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯ ಅತಿಥಿ ಕುಶಾಲಪ್ಪ. ಟಿ., ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಚಾರ್ಮಾತ, ಹರೀಶ್ ಕೊಯಿಲ, ಸಭಾಧ್ಯಕ್ಷತೆ ವಹಿಸಿದ್ದ ಶಿವರಾಮ ಉತ್ರoಬೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು, ಮಾಜಿ “ಎಸ್ ಡಿ ಎಂ ಸಿ “ಅಧ್ಯಕ್ಷರು,ಸದಸ್ಯರುಗಳು ಹಾಲಿ ಸದಸ್ಯರುಗಳು, ಪೋಷಕ ಬಂಧುಗಳು, ಶಾಲೆ, ಅಂಗನವಾಡಿ ಮಕ್ಕಳು, ಅಡುಗೆ ಸಿಬ್ಬಂದಿಗಳು ಅಲ್ಲದೆ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಪದವೀಧರ ಶಿಕ್ಷಕ ಮಹೇಶ್ ಕೆ.ಕೆ. ವಂದಿಸಿದರು.