
ಸುಳ್ಯ ಜ್ಯೋತಿ ಸರ್ಕಲ್ ಬಳಿ ಇರುವ ಸ. ಮಾ. ಹಿ. ಪ್ರಾ. ಶಾಲೆ ಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿದೂಷಿ ಶ್ಯಾಮಲ ಕೇಶವ್ ಸುಳ್ಯ ಇವರು ಸಂಗೀತ ತರಗತಿ ನಡೆಸಲಿದ್ದು ಇದರ ಉದ್ಘಾಟನಾ ಸಮಾರಂಭ 21.01.24 ರಂದು ನಡೆಯಿತು. ವೇದಿಕೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ, ಸಂಗೀತ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಕೇಶವ್, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಹಾಗೂ ಸಹಶಿಕ್ಷಕಿ ಶ್ರೀಮತಿ ಶೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.
ಪ್ರತಿ ಮಂಗಳವಾರ ಸಂಗೀತ ತರಗತಿ ನಡೆಯಲಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕೆಂದು ಸಂಗೀತ ಶಿಕ್ಷಕಿ ವಿದ್ಯಾರ್ಥಿಗಳಿಗೆ ವಿನಂತಿ ಮಾಡಿಕೊಂಡರು.