ಸುಬ್ರಹ್ಮಣ್ಯ ಜ.20: ಕರ್ನಾಟಕ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ನಿ ಹಾಗೂ ಮಗಳೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿದ ನಂತರ ಪುರೋಹಿತ ರಮೇಶ್ ಅಸ್ರಣ್ಣರವರು ದೇವರ ಪ್ರಸಾದ ನೀಡಿ ಶಾಲು ಹಾಕಿ ಗೌರವಿಸಿದರು. ಕ್ಷೇತ್ರದ ದೈವ ಹೊಸಳ್ಳಿಗಮ್ಮನ ದರ್ಶನ ಮಾಡಿದ ನಂತರ ದೇವಳದ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ನಾರಾಯಣಸ್ವಾಮಿಯವರನ್ನ ಶಾಲುಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಹಾಗೂ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು
- Wednesday
- January 22nd, 2025