Ad Widget

ಸುಬ್ರಹ್ಮಣ್ಯ ರೋಟರಿ ವತಿಯಿಂದ ವಿಕಲಚೇತನ ಮಹಿಳೆ ಮೀನಾಕ್ಷಿ ಅವರಿಗೆ ಧನಸಹಾಯ ಹಸ್ತಾಂತರ

ಸುಬ್ರಹ್ಮಣ್ಯ ಜ.12.: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಡುಗಲ್ಲಿನ ವಿಕಲಚೇತನ ಮಹಿಳೆ ಮೀನಾಕ್ಷಿ ಅವರಿಗೆ ಮನೆ ನಿರ್ಮಿಸಲು ಧನಸಹಾಯವನ್ನು ಶನಿವಾರ ರೋಟರಿ ಜಿಲ್ಲಾ3181 ಇದರ ನಿಕಟ ಪೂರ್ವ ಡಿಸ್ಟ್ರಿಕ್ಟ್ ಗವರ್ನರ್ ಎಚ್.ಆರ್. ಕೇಶವ ಅವರು ಹಸ್ತಾಂತರಿಸಿದರು.
ಪಂಜ ಸಮೀಪದ ಪಲ್ಲೋಡಿ ಎಂಬಲ್ಲಿ ಮೀನಾಕ್ಷಿ ಅವರು ಸುಬ್ರಹ್ಮಣ್ಯದ ಧಣಿವರಿಯದ ನಾಯಕ ಪ್ರಶಸ್ತಿ ಪುರಸ್ಕೃತ ಡಾ. ರವಿ ಕಕ್ಕೆ ಪದವು ಅವರ ವಿಶೇಷ ಮುತುವರ್ಜಿ ಹಾಗೂ ಸಹಾಯದಿಂದ ಗ್ರಾಮ ಪಂಚಾಯತ್ ಪಂಜ, ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಸ್ವಂತ ವಾಸದ ಮನೆಯನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಮನೆಯ ಬಹುತೇಕ ಕೆಲಸ ಕಾರ್ಯಗಳು ಆಗಿದ್ದು ಇನ್ನೂ ಪೂರ್ಣಗೊಳ್ಳಲು ದಾನಿಗಳಿಂದ ಸಹಾಯಧನದ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನವರು ಈಗಾಗಲೇ ಮನೆ ನಿರ್ಮಿಸಲು ಬೇಕಾದ ಸಿಮೆಂಟ್, ಬಾಗಿಲು ಕಿಟಕಿ ಹೀಗೆ ಸುಮಾರು ಐವತ್ತು ಸಾವಿರ ರೂಪಾಯಿಗಳ ವಸ್ತುಗಳನ್ನು ನೀಡಿದ್ದು ಶನಿವಾರ ರೋಟರಿ ಜಿಲ್ಲಾ3181 ನಿಕಟ ಪೂರ್ವ ಗವರ್ನರ್ ಅವರ ಮೂಲಕ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಪೂರ್ವಾಧ್ಯಕ್ಷರುಗಳಾದ ಸೀತಾರಾಮ ಎಣ್ಣೆಮಜಲ್, ವಿಜಯಕುಮಾರ, ಹಿರಿಯ ಸದಸ್ಯ ಸುದರ್ಶನ ಶೆಟ್ಟಿ, ಸದಸ್ಯ ಸಲೀಂ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಡಾ.ರವಿ ಕಕ್ಕೆ ಪದವು ಮತ್ತು ಮೀನಾಕ್ಷಿ ಹಾಗು ಅವರ ಮಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರವಿಕಕ್ಕೆ ಪದವು ಅವರನ್ನು ಜಿಲ್ಲಾ ಗವರ್ನರ್ ಅವರು ಶಾಲು ಹೊಂದಿಸಿ ಗೌರವಿಸಿದರು. ಮನೆ ಪೂರ್ಣಗೊಳ್ಳಲು ಇನ್ನಷ್ಟು ಹಣದ ಅವಶ್ಯಕತೆ ಇದ್ದು ದಾನಿಗಳು ಸಹಾಯ ಮಾಡುವಂತೆ ಮೀನಾಕ್ಷಿ ಅವರು ಕೋರಿರುತ್ತಾರೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!