
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಜನ ನಿರ್ದೇಶಕರ ಸ್ಥಾನಕ್ಕೆ ಜ.11 ರಂದು ಚುನಾವಣೆ ನಡೆದಿದ್ದು, ಬಿಜೆಪಿ, ಜೆ.ಡಿ.ಎಸ್ ಮೈತ್ರಿ 7 ಸ್ಥಾನ ಪಡೆದುಕೊಂಡು ಗೆಲುವನ್ನು ಸಾಧಿಸಿದೆ. ಕಾಂಗ್ರೆಸ್ 5 ಸ್ಥಾನ ಪಡೆದಿದೆ.
ಗೆಲುವು ಸಾಧಿಸಿದವರ ವಿವರ ಈ ಕೆಳಗಿನಂತಿದ್ದು,
ಸಾಮಾನ್ಯರ ಕ್ಷೇತ್ರ : ಕಾಂಗ್ರೆಸ್ ನ ರವೀಂದ್ರ ಕುಮಾರ್ ರುದ್ರಪಾದ(659 ಮತಗಳು), ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಜಯಪ್ರಕಾಶ್ ಕೂಜುಗೋಡು(572 ಮತಗಳು), ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ವೆಂಕಟೇಶ್.ಹೆಚ್.ಎಲ್(556 ಮತಗಳು), ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಕಿರಣ್ ಪೈಲಾಜೆ(540 ಮತಗಳು), ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಯಶೋಧ ಕೃಷ್ಣ ನೂಚಿಲ(500 ಮತಗಳು) ಹಾಗೂ ಕಾಂಗ್ರೆಸ್ ನ ಸೋಮಶೇಖರ್ ಕಟ್ಟೆಮನೆ(495 ಮತಗಳು) ಇವರುಗಳು ಸಾಮಾನ್ಯರ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ಹಿಂದುಳಿದ ವರ್ಗ “ಎ” ಕ್ಷೇತ್ರ : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಗಿರೀಶ್ ಆಚಾರ್ಯ ಪೈಲಾಜೆ(557 ಮತಗಳು) ಗೆಲುವನ್ನು ಸಾಧಿಸಿದ್ದಾರೆ.
ಹಿಂದುಳಿದ ವರ್ಗ “ಬಿ” ಕ್ಷೇತ್ರ : ಕಾಂಗ್ರೆಸ್ ನ ಮೋಹನ್ ದಾಸ್ ರೈ(542 ಮತಗಳು) ಗೆಲುವನ್ನು ಸಾಧಿಸಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರ : ಕಾಂಗ್ರೆಸ್ ನ ರಮ್ಯಾ ಪೈಲಾಜೆ(622 ಮತಗಳು), ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಭಾರತಿ ದಿನೇಶ್(579 ಮತಗಳು) ಗೆಲುವನ್ನು ಸಾಧಿಸಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ದುಗ್ಗಪ್ಪ ನಾಯ್ಕ ಹೆಚ್(566 ಮತಗಳು) ಗೆಲುವನ್ನು ಸಾಧಿಸಿದ್ದಾರೆ.
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ : ಕಾಂಗ್ರೆಸ್ ನ ಮಾಧವ ದೇವರಗದ್ದೆ(637 ಮತಗಳು) ಗೆಲುವನ್ನು ಸಾಧಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಮೈತ್ರಿ ಜಯಭೇರಿ ; ಹರ್ಷಾಚರಣೆ
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಜನ ನಿರ್ದೇಶಕರ ಸ್ಥಾನಕ್ಕೆ ಜ.11 ರಂದು ಚುನಾವಣೆ ನಡೆದಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 7 ಸ್ಥಾನಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದು, ಜ.11 ರಂದು ಸಂಜೆ ಹರ್ಷಾಚರಣೆ ನಡೆಸಿದರು.
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ವಿಜೇತರಿಗೆ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
(ವರದಿ : ಉಲ್ಲಾಸ್ ಕಜ್ಜೋಡಿ)