
ಸುಳ್ಯ ಗುತ್ತಿಗಾರು ರಸ್ತೆಯ ಮಿತ್ತಮಜಲು ತಿರುವಿನಲ್ಲಿ ಬೇರೆ ವಾಹನದಡಿಗೆ ಬಿದ್ದು ನರಳಾಡುತ್ತಿದ್ದ ಹಾವನ್ನು ತಪ್ಪಿಸುವ ಭರದಲ್ಲಿ ಬೈಕ್ ಸವಾರ ಪಿಕಪ್ ಗೆ ಬೈಕ್ ಢಿಕ್ಕಿ ಹೊಡೆದು ಕಾಲು ಜಖಂಗೊಂಡ ಘಟನೆ ಜ.12 ರಂದು ಸಂಜೆ ನಡೆದಿದೆ.
ಸುಳ್ಯ ಕಡೆಯಿಂದ ದುಗ್ಗಲಡ್ಕ ಕ್ಕೆ ಬರುತ್ತಿದ್ದ ಪಿಕಪ್ ಗೆ ಮಿತ್ತಮಜಲು ತಿರುವಿನಲ್ಲಿ ಮಧೂರು ಮೂಲದ ಬೈಕ್ ಸವಾರ ಢಿಕ್ಕಿ ಹೊಡೆದಿದ್ದು, ಸವಾರನ ಕಾಲು ಜಖಂಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.