
ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಇದರ 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಿದ್ದರು. ಇಂದು ಅಧ್ಯಕ್ಷ ಉಪಾಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು ಹಾಗೂ ಉಪಾಧ್ಯಕ್ಷರಾಗಿ ಸಚಿನ್ ಬಳ್ಳಡ್ಕ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಪಿ.ಸಿ.ಜಯರಾಮ್, ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಕರುಣಾಕರ ಪಾರೆಪ್ಪಾಡಿ, ಚಂದ್ರಶೇಖರ ಗುಡ್ಡೆ, ಶಕುಂತಲಾ ಕೇವಳ, ಪ್ರವೀಣಾ ಪಾಲ್ತಾಡು, ಶಿವರಾಮ ಆಚಾರಿ ಚಿರೆಕಲ್ಲು, ಆನಂದ ಶೆಟ್ಟಿಮಜಲು, ಪ್ರದೀಪ್ ಕುಮಾರ್.ಪಿ.ಬಿ ಉಪಸ್ಥಿತರಿದ್ದರು.