ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ಜ.09 ರಂದು ಕಲ್ಲುಗುಂಡಿ, ಚೆಂಬು, ಮತ್ತು ಕೊಡಗು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವದ ಕುರಿತು ಸಮಾಲೋಚನೆ ನಡೆಸಿದರು . ವಿಚಾರ ಮಂಡನೆ ಸೇರಿದಂತೆ , ಶ್ರೀಮತಿ ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮುಂತಾದವರು ಕಾರ್ಯ ಯೋಜನೆ ಕುರಿತು ಚರ್ಚಿಸಿದರು .
ಕಿಶೋರ್ , ದೀಪಕ್ ಪೇರಡ್ಕ, ಪುನೀತ್ ದೊಡ್ಡಡ್ಕ , ಮನೀಶ್ ಗೂನಡ್ಕ, ಉದಯ, ಲೋಕೇಶ್ ಕಲ್ಲುಗುಂಡಿ, ರವಿ ಎಡ್ಮಣಿ, ವಿನಯ ದುಗ್ಗಲ, ಪ್ರೇಮ್ ಕುಮಾರ್, ಈಶ್ವರ ಆಚಾರ್ಯ , ವರದರಾಜ ಸಂಕೇಶ ಸೇರಿದಂತೆ 30 ಕ್ಕೂ ಹೆಚ್ಚು ಪ್ರಮುಖರು ಉಪಸ್ಥಿತರಿದ್ದರು .