
ಸುಳ್ಯದ ಗಾಂಧಿನಗರದ ಜನತಾ ಸ್ಟೋರ್ ಮುಂಬಾಗದಲ್ಲಿ ಇನ್ಸ್ ಪೈರ್ ಮೆನ್ಸ್ ವೇರ್ ಡಿ.05 ರಂದು ಶುಭಾರಂಭಗೊಂಡಿತು.
ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ. ನೀರಬೀದಿರೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವರ್ತಕರ ಸಂಘ ಸುಳ್ಯದ ಅಧ್ಯಕ್ಷರಾದ ಸುಧಾಕರ ರೈ ಪಿ. ಬಿ, ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಅಧ್ಯಕ್ಷರಾದ ಪಿ. ಎಸ್. ಗಂಗಾಧರ, ಜನತಾ ಗ್ರೂಪ್ಸ್ ನ ಅಬ್ದುಲ್ ಹಮೀದ್, ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಟಿ ವಿಶ್ವನಾಥ ಉಪಸ್ಥಿತರಿದ್ದರು. ಮಾಲಕರಾದ ರಂಜಿತ್ ಸ್ವಾಗತಿಸಿ,ವಂದಿಸಿದರು.
ಇಲ್ಲಿ ಪುರುಷರ ಬ್ರಾಂಡೆಂಡ್ ಕಂಪೆನಿಯ ಪ್ಯಾಂಟ್ , ಶರ್ಟ್, ನೈಟ್ ಪ್ಯಾಂಟ್ ಹಾಗೂ ವಿವಿಧ ಸಿದ್ಧ. ಉಡುಪುಗಳು ಮತ್ತು ಬ್ರಾಂಡೆಡ್ ಫೂಟ್ ವಾರ್ ಲಭ್ಯವಿದೆ.