ಸುಳ್ಯದ ಪುರದೊಡೆಯ ಶ್ರೀ ಚನ್ನಕೇಶವನಿಗೆ ಜಾತ್ರಾ ಸಂಭ್ರಮ ಸುಮಾರು 300 ವರ್ಷಗಳ ನಂತರ ನೂತನವಾಗಿ ಆಗಮಿಸಿದ ವಿಶೇಷವಾದ ಬ್ರಹ್ಮರಥ ಸಮರ್ಪಣೆಯ ನಂತರದ ಪ್ರಥಮ ಜಾತ್ರಾ ಮಹೋತ್ಸವ ಇದಾಗಿದ್ದು ಬ್ರಹ್ಮರಥವು ವಿಶೇಷ ಆಕರ್ಷಣೀಯ ಕೇಂದ್ರವಾದ ಕಾರಣ ತಾಲ್ಲೂಕಿನ ಮೂಲೆ ಮೂಲೆಗಳಿಂದ ಅತಿ ಹೆಚ್ಚು ಜನರು ಜಾತ್ರೆಗೆ ಆಗಮಿಸಿ. ಬ್ರಹ್ಮರಥೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ ದಿನಾಂಕ 07-01-2025ನೇ ಮಂಗಳವಾರ ರಾತ್ರಿ ಉತ್ಸವ ಬಲಿ ಹೊರಡುವುದು
ದಿನಾಂಕ 08-01-2025ನೇ ಬುಧವಾರ
ಬೆಳಿಗ್ಗೆ ಸಣ್ಣ ದರ್ಶನ ಬಲಿ, ನಡುಬೆಳಗು, ಬಟ್ಟಲು ಕಾಣಿಕೆ
ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ ವಿವೇಕಾನಂದ ವೃತ್ತ, ಹಳೆಗೇಟು, ಹೊಸಗದ್ದೆ ಕಟ್ಟೆ, ಅಮೃತಭವನ, ರಾಮಮಂದಿರ, ಜಟ್ಟಿಪಳ್ಳ ಕಟ್ಟೆ ಪೂಜೆಗಳು
ದಿನಾಂಕ 09-01-2025ನೇ ಗುರುವಾರ ಬೆಳಿಗ್ಗೆ ಅಜ್ಜಾವರ ಶ್ರೀ ಶಂಕರ ಭಾರತೀ ವೇದ ಪಾಠ ಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ರಾತ್ರಿ ಮಿತ್ತೂರು ದೈವಗಳ ಭಂಡಾರ ಬರುವುದು, ಕಾನತ್ತಿಲ ದೈವಗಳ ಭಂಡಾರ ಬರುವುದು ವಾಲಸಿರಿ ಉತ್ಸವ ದಿನಾಂಕ 10-01-2025ನೇ ಶುಕ್ರವಾರ ಬೆಳಿಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ರಾತ್ರಿ ಕಲ್ಕುಡ ದೈವಗಳ ಭಂಡಾರ ಬರುವುದು ನಂತರ ಬ್ರಹ್ಮರಥೋತ್ಸವ,ದಿನಾಂಕ 11-01-2025ನೇ ಶನಿವಾರ ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು
ಬೆಳಿಗ್ಗೆ ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಭಾರದ್ವಾಜಾಶ್ರಮ ಅರಂಬೂರು ವೇದ ಪಾಠಶಾಲಾ ವಿದ್ಯಾರ್ಥಿಗಳಿಂದ ವೇದ ಪಾರಾಯಣ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ರಾತ್ರಿ ಬಜಪ್ಪಿಲ ದೈವಗಳ ಭಂಡಾರ ಬರುವುದು, ಉತ್ಸವ ಬಲಿ ಹೊರಟು ಪಟ್ಟಣ ಸವಾರಿ. ಆರಕ್ಷಕ ಠಾಣಾ ಕಟ್ಟೆಯಿಂದ ಗಾಂಧಿನಗರ, ಅರಣ್ಯ ಇಲಾಖೆ, ಕೇರ್ಪಳ, ತಾಲೂಕು ಕಚೇರಿ ಪಯಸ್ವಿನಿ ನದಿ ಬಳಿ ಕಟ್ಟೆ ಪೂಜೆಗಳು, ಅವಧೃತ ಸ್ನಾನವಾಗಿ ಬಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ
ದಿನಾಂಕ 12-01-2025ನೇ ಆದಿತ್ಯವಾರ ಮಧ್ಯಾಹ್ನ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನೆರವೇರಲಿದೆ.
- Wednesday
- January 8th, 2025