ಅಜ್ಜಾವರ ಗ್ರಾಮದ ಹಲವು ವರ್ಷಗಳ ಬೇಡಿಕೆಯಾದ
ಸುಳ್ಯ ಅಡ್ಕಾರ್,ಪೇರಾಲು ಮಾರ್ಗವಾಗಿ ಅಡ್ಪಂಗಾಯಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಆದರೆ ಅದು ಸಾಧ್ಯವಾಗದೇ ಇದ್ದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ನೇತೃತ್ವದಲ್ಲಿ ಅಧಿಕಾರಿಗಳಿಗೆ ತಿಳಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ನಡೆದ ಗ್ರಾಮ ಮಟ್ಟದ ವಿಲೇವಾರಿ ಸಭೆಯಲ್ಲಿಯು ಪ್ರತಿಧ್ವನಿಸಿದ ಪರಿಣಾಮವಾಗಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಕಾರಿ ಸಾರಿಗೆ ವ್ಯವಸ್ಥೆಯನ್ನು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ ಎ ಬಿ ಯವರ ನೇತೃತ್ವದಲ್ಲಿ ತರುವಲ್ಲಿ ಯಶಸ್ವಿಯಾಗಿದ್ದು ಇಂದು ಮುಂಜಾನೆ ನೂತನ ರೂಟ್ ಬಸ್ಸು ಸಂಚಾರ ಆರಂಭಗೊಂಡಿದ್ದು ಅದನ್ನು ಅಡ್ಪಂಗಾಯದಲ್ಲಿ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಬಸ್ಸನ್ನು ಸ್ವಾಗತಿಸಲಾಯಿತು.
- Thursday
- January 9th, 2025