ಎಡಮಂಗಲ ಗ್ರಾಮದ ಹೇಮಳ ದಿ. ಈಶ್ವರ ಗೌಡರ ಪುತ್ರ, ಬಂಟ್ವಾಳ ಬಿಇಒ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಪ್ರಕಾಶ್ಚಂದ್ರ ಹೇಮಳರವರು ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು.
ಅವರಿಗೆ 41 ವರ್ಷ ವಯಸ್ಸಾಗಿತ್ತು. ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಉದ್ಯೋಗಿಯಾಗಿದ್ದ ಇವರು ಆ ಬಳಿಕ ಬಂಟ್ವಾಳ ಬಿಇಒ ಕಚೇರಿ ಗೆ ಅಧೀಕ್ಷಕರಾಗಿ ಭಡ್ತಿಗೊಂಡು ವರ್ಗಾವಣೆಗೊಂಡಿದ್ದರು. ಹೇಮಳ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಸ್ವಾತಿ, ಪುತ್ರಿ ಗಹನ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.