ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದಹಾಗೂ ಮನೆಯವರು ನೀಡುತ್ತಿರುವ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು.
ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಪದ್ಮನಾಭ ತಂತ್ರಿಗಳ ಮರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನೆರವೇರಿದ ಬಳಿಕ ಡಾ|ಕೆ.ವಿ.ಚಿದಾನಂದ, ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ. ಡಾ.ಐಶ್ವರ್ಯ ಕೆ.ಸಿ., ಡಾ.ಗೌತಮ್ ಹಾಗೂ ಕುರುಂಜಿ ಮನೆಯವರಿದ್ದು ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೊಕೇಸರರ ಪರವಾಗಿ ವೀರಕೇಸರಿಯವರು, ಬ್ರಹ್ಮರಥ ಸಮರ್ಪಣಾ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿಗಳಾದ ಡಾ.ಲೀಲಾಧರ್ ಡಿ.ವಿ., ಕೆ.ವಿ.ಹೇಮನಾಥ್, ಆಗೋ ರಾಮಚಂದ್ರ, ಮೀನಾಕ್ಷಿ ಗೌಡರು, ರಮೇಶ್ ಬೈಪಾಡಿತ್ತಾಯ, ಲಿಂಗಪ್ಪ ಗೌಡ ಕೇರ್ಪಳ, ವಿವಿಧ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.