ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2025ರ ಜ.02 ರಿಂದ 05 ರವರೆಗೆ ಕಿರುಷಷ್ಠಿ ಮಹೋತ್ಸವವು ನಡೆಯಲಿದ್ದು, ಜ.02 ಗುರುವಾರದಂದು ಸಂಜೆ 5:00 ರಿಂದ 6:30 ರವರೆಗೆ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ಧರ್ಮ ಸಮ್ಮೇಳನ ಹಾಗೂ ಸಭಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಗೌರವ ಉಪಸ್ಥಿತರಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಾಕ್ಕಳ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಉಪಸ್ಥಿತರಿರಲಿದ್ದಾರೆ. ನಂತರ ಸಂಜೆ 6:30 ರಿಂದ 7:30 ರವರೆಗೆ ಅಂಕುಶ್ ನಾಯಕ್ ಹಾಗೂ ಬಳಗದವರಿಂದ “ಸಿತಾರ್ ವಾದನ”, ಸಂಜೆ 7:30 ರಿಂದ 9:30 ರವರೆಗೆ ವಿದ್ವಾನ್ ಹರಿಪ್ರಸಾದ್ ಸುಬ್ರಹ್ಮಣ್ಯಂ, ಕೊಚ್ಚಿನ್ ಕೇರಳ ಇವರಿಂದ “ಕೊಳಲು ವಾದನ”, ರಾತ್ರಿ 9:30 ರಿಂದ 10:30 ರವರೆಗೆ ಡ್ಯಾನ್ಸ್ & ಬೀಟ್ಸ್ ಸುಬ್ರಹ್ಮಣ್ಯ, ಬೆಳ್ಳಾರೆ, ಪಂಜ ಹಾಗೂ ಕೈಕಂಬ ಶಾಖೆಯ ಮಕ್ಕಳಿಂದ “ನೃತ್ಯ ಸಂಭ್ರಮ” ಹಾಗೂ ರಾತ್ರಿ 10:30 ರಿಂದ 12:00 ರವರೆಗೆ ಮನೋಜ್ ಕುಮಾರ್, ಪೊಕುನ್ನತ್, ಪೊಯಿನಾಚಿ, ಕಾಸರಗೋಡು ಇವರಿಂದ “ಸ್ವರ ರಾಗಂ ಆರ್ಕೇಸ್ಟ್ರಾ” ಕಾರ್ಯಕ್ರಮ ನಡೆಯಲಿದೆ.
ಜ.03 ಶುಕ್ರವಾರದಂದು ಸಂಜೆ 5:00 ರಿಂದ 6:00 ರವರೆಗೆ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರ ತಂಟೆಪ್ಪಾಡಿ, ಕಳಂಜ, ಬೆಳ್ಳಾರೆ ಪ್ರಸ್ತುತಪಡಿಸುವ “ನೃತ್ಯ ಸಂಭ್ರಮ” ಶಾಸ್ತ್ರೀಯ ಹಾಗೂ ಜಾನಪದ ನೃತ್ಯ, ಸಂಜೆ 6:00 ರಿಂದ 7:00 ರವರೆಗೆ ಆರಾಧನಾ ನೃತ್ಯ ಕೇಂದ್ರ, ಮೂಡಬಿದಿರೆಯ ವಿದುಷಿ ಶ್ರೀಮತಿ ಸುಖದಾ ಬರ್ವೆ ಇವರ ಶಿಷ್ಯವೃಂದದವರಿಂದ “ನೃತ್ಯ ಸಿಂಚನ” ಕಾರ್ಯಕ್ರಮ ಹಾಗೂ ರಾತ್ರಿ 7:00 ಗಂಟೆಯಿಂದ 10:00 ಗಂಟೆಯವರೆಗೆ ನಟರಾಜ ಎಂಟರ್ಟೈನರ್ಸ್ ಅರ್ಪಿಸುವ ಪ್ರಸಿದ್ಧ ಗಾಯಕರಾದ ರಾಜೇಶ್ ಕೃಷ್ಣನ್ ರವರಿಂದ “ಸಂಗೀತ ಸಂಜೆ” ಕಾರ್ಯಕ್ರಮ ನಡೆಯಲಿದೆ.
ಡಿ.04 ಶನಿವಾರದಂದು ಸಂಜೆ 5:00 ರಿಂದ 6:00 ರವರೆಗೆ ಶ್ರೀಮತಿ ನೇಹಾ ರಕ್ಷಿತ್, ಮಂಗಳೂರು ಇವರಿಂದ “ಭಾವ-ಭಕ್ತಿ ಸಿಂಚನ”, ಸಂಜೆ 6:00 ರಿಂದ 8:00 ರವರೆಗೆ ಸಂಗೀತ ಕಲಾ ಆಚಾರ್ಯ, ಸ್ವರರತ್ನ ವಿದ್ವಾನ್ ವಿಠಲ ರಾಮಮೂರ್ತಿ, ಚೆನ್ನೈ ಇವರಿಂದ “ವಯೋಲಿನ್ ವಾದನ ಕಛೇರಿ”, ರಾತ್ರಿ 8:00 ರಿಂದ 10:00 ರವರೆಗೆ ವಿದ್ವಾನ್ ಶ್ರೀ ಹರಿಕೃಷ್ಣನ್, ಎರ್ನಾಕುಲಂ ಇವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಹಾಗೂ ರಾತ್ರಿ 10:00 ಗಂಟೆಯಿಂದ ಶ್ರೀದೇವಿ ಮಹಿಳಾ ಯಕ್ಷ ತಂಡ, ಬಾಲವನ, ಪುತ್ತೂರು ಇವರಿಂದ “ಮಾತೃ ದರ್ಶನ-ಷಣ್ಮುಖ ವಿಜಯ” ಯಕ್ಷಗಾನ ಪ್ರಸಂಗ ನಡೆಯಲಿದೆ.
ಜ.05 ಆದಿತ್ಯವಾರದಂದು ಸಂಜೆ 4:30 ರಿಂದ 5:00 ರವರೆಗೆ ವಿಶ್ವದಾಖಲೆ ಮಾಡಿದ ಯೋಗಪಟು ಕು| ಗೌರಿತಾ.ಕೆ.ಜಿ ಇವರಿಂದ “ಯೋಗ ನೃತ್ಯ” ಹಾಗೂ ಸಂಜೆ 5:00 ರಿಂದ 6:30 ರವರೆಗೆ ಸನಾತನ ನಾಟ್ಯಾಲಯ, ಮಂಗಳೂರು ಇಲ್ಲಿನ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯವೃಂದದವರು ಪ್ರಸ್ತುತಪಡಿಸುವ “ಸನಾತನ ನೃತ್ಯಾಂಜಲಿ” ಕಾರ್ಯಕ್ರಮ ನಡೆಯಲಿದ್ದು, ಸಾಯಂಕಾಲ ಸಂಜೆ 6:30 ರಿಂದ “ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ” ನಡೆಯಲಿದೆ. ನಂತರ ರಾತ್ರಿ 8:00 ರಿಂದ 9:00 ರವರೆಗೆ ವಿದುಷಿ ಡಾ| ಸುಚಿತ್ರಾ ಹೊಳ್ಳ ಇವರ ಶಿಷ್ಯೆ ಕು| ಅವನಿ ನಾಯಕ್, ಪುತ್ತೂರು ಇವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ”, ರಾತ್ರಿ 9:00 ರಿಂದ 10:00 ರವರೆಗೆ ಕೌಸ್ತುಭ ಕಲಾ ಸೇವಾ ಟ್ರಸ್ಟ್(ರಿ.) ಕೂಜುಗೋಡು, ಐನೆಕಿದು, ದೇವರಹಳ್ಳಿ ಇವರಿಂದ “ಶ್ರೀರಾಮ ದರ್ಶನ” ಮಕ್ಕಳ ಯಕ್ಷಗಾನ ಪ್ರಸಂಗ, ರಾತ್ರಿ 10:00 ಗಂಟೆಯಿಂದ ಕಲಾಗ್ರಾಮ ಕಲ್ಮಡ್ಕ ಪ್ರಸ್ತುತಪಡಿಸುವ ಡಾ| ಶಿವರಾಮ ಕಾರಂತರ ನೈಜ ಕಥೆ ಕಾದಂಬರಿ ಆಧಾರಿತ “ಚೋಮನ ದುಡಿ” ತುಳು ನಾಟಕ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- January 8th, 2025