ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿ ಎ ಪರೀಕ್ಷೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆ ಯಾಗಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ವಿದ್ಯಾಭಾರತಿ ಶಾಲೆ ಅಡೂರು, ಪ್ರೌಢ ಶಿಕ್ಷಣವನ್ನು ಗಜಾನನ ಶಾಲೆ ಈಶ್ವರ ಮಂಗಲ, ಬಿ ಕಾಂ ನ್ನು ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು, ಸಿ ಎ ಆರ್ಟಿಕಲ್ ಶಿಪ್ ನ್ನು ಶಿವಕುಮಾರ್ ಕೆ, ಪಾರ್ಟ್ನರ್ ಆಫ್ ರಾವ್ ಮತ್ತು ಬಸ್ರಿ ಅವರಲ್ಲಿ ಪೂರೈಸಿದ್ದರು. ಈ ಸಾಧಕಿ ಅಡೂರು ಬೈತನಡ್ಕದ ಬಾಲಸುಬ್ರಹ್ಮಣ್ಯ ಭಟ್ ಎಸ್, ಶಾರದಾ ದೇವಿ ದಂಪತಿ ಪುತ್ರಿ. ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
- Wednesday
- January 8th, 2025