ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕಿನ ಸುಳ್ಯವಲಯದ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯಲ್ಲಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವೆಂಕಪ್ಪಗೌಡರವರು ಕಾನೂನಿನ ಬಗ್ಗೆ ಅರಿವು ಇರಲಿ ಎಂದು ತಿಳಿಸಿ, ವಾಹನ ಚಲಾವಣೆಯಲ್ಲಿ ಆಗುವ ಸಮಸ್ಯೆಗಳು, ನಮ್ಮಲ್ಲಿ ಬೇಕಾದ ದಾಖಲಾತಿಗಳು ಯಾವುದೆಲ್ಲ ಎಂಬುದನ್ನು ವಿವರವಾಗಿ ಮಾಹಿತಿ ನೀಡಿದರು, ದಾಖಲಾತಿಗಳು ನಮ್ಮಲ್ಲಿ ಇಲ್ಲದೆ ಇದ್ದ ಸಂದರ್ಭದಲ್ಲಿ ಯಾವ ಸಮಸ್ಯೆಯನ್ನು ನಾವು ಎದುರಿಸಬೇಕು ಎಂಬುದನ್ನು ತಿಳಿಸಿದರು, ಆದುದರಿಂದ ಎಲ್ಲಾ ಸದಸ್ಯರು ವಾಹನ ಚಲಾವಣೆ ಸಂದರ್ಭ ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲಾ ಧರ್ಮದ ಮಹಿಳೆಯರಿಗೆ ಮತ್ತು ಪುರುಷರಿಗೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು, ಧರ್ಮಸ್ಥಳ ಯೋಜನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವವರು ನಮಗೆ ಯಾವುದೇ ಸವಲತ್ತುಗಳನ್ನು ನೀಡುವುದಿಲ್ಲ ಆದುದರಿಂದ ಅದಕ್ಕೆ ಯಾವುದೇ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಇರಿ ಎಂದು ಸಲಹೆ ನೀಡಿದರು.
ಆದಿಶಕ್ತಿ ಮತ್ತು ಬನ್ನಾರಿ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಿ ಶುಭ ಹಾರೈಸಿದರು.
ವಲಯ ಮೇಲ್ವಿಚಾರಕಿಯಾದ ಶ್ರೀಮತಿ ಜಯಶ್ರೀರವರು ಸಂಘಗಳ ವಾರದ ಸಭೆಯ ನಿರ್ವಹಣೆಯ ಬಗ್ಗೆ ಮತ್ತು ಸುಜ್ಞಾನನಿಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಒಂದು ತಂಡದಲ್ಲಿ ಎಲ್ಲಾ ಸದಸ್ಯರು ನಿರಂತರ ಪತ್ರಿಕೆ ಚಂದಾ ಮಾಡಿರುವ ಬಗ್ಗೆ ಗುರುತಿಸಿ ನಾಲ್ಕು ತಂಡಗಳಿಗೆ ಒಕ್ಕೂಟದ ವತಿಯಿಂದ ವಿಶೇಷ ಬಹುಮಾನ ನೀಡಲಾಯಿತು, ಜವಾಬ್ದಾರಿ ಸಂಘದ ವತಿಯಿಂದ ಸಭೆಯಲ್ಲಿ ಆಸೀನರಾದ ಸದಸ್ಯರಿಗೆ ರಸಪ್ರಶ್ನೆಯನ್ನು ಕೇಳಿ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಮನೋಹರ್, ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರಿ, ಉಪಾಧ್ಯಕ್ಷರಾದ ಇಂದಿರಾ, ಮೋಹನ್, ಕಾರ್ಯದರ್ಶಿಯಾದ ದೀಪಿಕಾ, ಯಮುನಾ, ಜೊತೆ ಕಾರ್ಯದರ್ಶಿಯಾದ ರಶ್ಮಿ, ಸೇವಾ ಪ್ರತಿನಿಧಿಯಾದ ಸೌಜನ್ಯ, ಒಕ್ಕೂಟದ ಎಲ್ಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
ದಾಕ್ಷಾಯಿಣಿ ಸಂಘದ ವಸಂತಿ ರವರು ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.
- Wednesday
- January 8th, 2025