ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಜಾಲ್ಲೂರು ಸಮೀಪ ಮಾಪಳಡ್ಕ ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರುಗಳ ಸ್ಮರಣಾರ್ಥ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಮಾಪಳಡ್ಕ ಮಖಾಂ ಉರೂಸ್ ಹಾಗೂ ಮಾಪಳಡ್ಕ ದರ್ಸಿನಲ್ಲಿ ಕುರ್-ಆನ್ ಕಂಠಪಾಠ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ಪ್ರದಾನ ಸಮ್ಮೇಳನವು ಜನವರಿ 4,5,6 ದಿನಾಂಕಗಳಲ್ಲಿ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಮಾಪಳಡ್ಕ ದರ್ಗಾ ಸಮಿತಿ ಅಧ್ಯಕ್ಷ ಎ ಬಿ ಅಶ್ರಫ್ ಸಹದಿ ಯವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾಪಳಡ್ಕ ಮುದಗ್ರಿಸ್ ಹಾಫೀಝ್ ಅಬ್ದುಸಲಾಂ ನಿಝಾಮಿ ಕಾರ್ಯಕ್ರಮದ ಕುರಿತಾಗಿ ಮಾತನಾಡುತ್ತಾ
ಜನವರಿ 4 ಶನಿವಾರ ರಾತ್ತಿ 7 ಗಂಟೆಗೆ ಮೌಲಿದ್ ಪಾರಾಯಣ ಮತ್ತು 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಇರವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಸಂಕೇಶ್ ಇಬ್ರಾಹೀಂ ಹಾಜಿಯವರ ಅಧ್ಯಕ್ಷತೆಯಲ್ಲಿ ಆದೂರು ಸಯ್ಯದ್ ಕುಂಞ ತಂಜಳ್ ರವರು ಪ್ರಾರ್ಥನೆಯನ್ನು ನೆರವೇರಿಸಿ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಜನವರಿ 4 ಶನಿವಾರ ರಾತ್ತಿ 7 ಗಂಟೆಗೆ ಮೌಲಿದ್ ಪಾರಾಯಣ ಮತ್ತು 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಇರವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಸಂಕೇಶ್ ಇಬ್ರಾಹೀಂ ಹಾಜಿಯವರ ಅಧ್ಯಕ್ಷತೆಯಲ್ಲಿ ಆದೂರು ಸಯ್ಯದ್ ಪೂಕುಂಞ ತಂಜಳ್ ರವರು ಪ್ರಾರ್ಥನೆಯನ್ನು ನೆರವೇರಿಸಿ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಬಹು ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜನವರಿ 5 ಆದಿತ್ಯವಾರ ರಾತ್ರಿ 7 ಗಂಟೆಗೆ ದಿಕ್ ದುಆ ಸಂಗಮ ನಡೆಯಲಿದ್ದು ಅಸ್ಸಯ್ಯದ್ ಎನ್. ಪಿ. ಯಂ. ಝನುಲ್ ಆಬಿದೀನ್ ತಂಜಳ್ ದುಗ್ಗಲಡ್ಕ ಪ್ರಾರ್ಥನೆಗೆ ನೇತ್ರತ್ವ ವಹಿಸಲಿದ್ದಾರೆ.
ಇರುವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿಯ ಉಪಾಧ್ಯಕ್ಷ ಹಸೈನಾರ್ ದರ್ಮತನ್ನಿ ಯವರ ಅಧ್ಯಕ್ಷತೆಯಲ್ಲಿ ಬಹು ಮುನೀರ್ ಹುದವಿ ವಿಳಯಿಲ್ ಮುಖ್ಯ ಭಾಷಣ ನಡೆಸಲಿದ್ದಾರೆ.ಮುಖ್ಯ ಅತಿಥಿಯಾಗಿ ಯುವ ಉದ್ಯಮಿ ಕೊಡುಗೈ ದಾನಿ ಜನಾಬ್ ಅಬ್ದುಲ್ ರಹ್ ಮಾನ್ ಸಂಕೇಶ್ ಭಾಗವಹಿಸಲಿದ್ದಾರೆ.
ಜನವರಿ 6 ಸೋಮವಾರ ರಾತ್ರಿ 8 ಗಂಟೆಗೆ ಉರೂಸ್ ಸಮಾರೋಪ ಸಮಾರಂಭ ಹಾಗೂ ಹಾಫಿಝ್ ಬಿರುದು ದಾನ ಸಮ್ಮೇಳನ ನಡೆಯಲಿದ್ದು ಬದ್ರುಸ್ಸಾದಾತ್ ಸಯ್ಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ ತಂಜಳ್ ರವರು ನಾಯಕತ್ವ ನೀಡಲಿದ್ದಾರೆ.
ಜಮಾಅತ್ ಕಮಿಟಿ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿಯವರ ಅಧ್ಯಕ್ಷತೆಯಲ್ಲಿ ಬಹು ಇಬ್ರಾಹೀಂ ಸಖಾಫಿ ತಾತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಉರೂಸ್ ಅಂಗವಾಗಿ ಧ್ವಜಾರೋಹಣ, ಮೌಲಿದ್ ಪಾರಾಯಣ, ಬುರ್ದಾ ಮಜ್ಜಿಸ್, ಖತಮುಲ್ ಕುರ್- ಆನ್ ಸಂಗಮ, ದಿಕ್ರ ದುಆ ಸಂಗಮ, ಮತ ಪ್ರವಚನ, ಹಾಫಿಝ್ ಬಿರುದು ದಾನ, ಉರೂಸ್ ದಿನಗಳಲ್ಲಿ ಅನ್ನದಾನ, ಉರೂಸ್ ತಬುಕ್ ವಿತರಣೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಇರುವಂಬಳ್ಳ ಜಮಯಾತ್ ಸಮಿತಿ ಕೋಶಾಧಿಕಾರಿ ಐ ಹೆಚ್ ಹಸೈನಾರ್ ಉಪಸ್ಥಿತರಿದ್ದರು