Ad Widget

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ ಗೋಕುಲ್ ದಾಸ್ ಸಾರ್ವಜನಿಕ ಅಭಿನಂದನಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ. ಅಭಿಮಾನಿಗಳು ಹಿತೈಷಿಗಳಿಂದ ಸನ್ಮಾನ.

ಸುಳ್ಯ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ಗೋಕುಲ್ ದಾಸ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ಲಯನ್ಸ್ ಸೇವಾ ಸದನ ಸುಳ್ಯದಲ್ಲಿ ಅದ್ದೂರಿಯಾಗಿ ಜರುಗಿತು . ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಹಿರಿಯ ಸಹಕಾರಿ ಸೀತಾರಾಮ ರೈ ಸವಣೂರು ರವರು ಉದ್ಘಾಟಿಸಿ ಮಾತನಾಡುತ್ತಾ ಕೆ.ಗೋಕುಲ್ ದಾಸ್ ರವರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಕೈಗಳನ್ನು ಆಡಿಸಿದ್ದು ಅವರು ನಾಡು ನುಡಿಗಾಗಿ ಅವಿರತವಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದು ಅವರ ಬದುಕಿನ ಬಗ್ಗೆ ಉಲ್ಲೇಖ ಪಡಿಸುತ್ತಾ ತಮ್ಮ ನೆಚ್ಚಿನ ಶಿಷ್ಯ ಉತ್ತಮ ಕೆಲಸ ಮಾಡಿದ್ದು ಅವರನ್ನು ಗುರುತಿಸುವುದು ನಮ್ಮ ಸಂಸ್ಕೃತಿಯಾಗಿದೆ ನನ್ನೊಂದಿಗೆ ಬೆಳೆದ ಹುಡುಗನಿಗೆ ಪ್ರಶಸ್ತಿ ಬಂದಾಗ ಸಂತೋಷವಾಗುತ್ತದೆ. ಪ್ರಶಸ್ತಿಯಲ್ಲಿ ನನಗೂ ಪಾಲು ಇದೆ ಹೇಳಿ ಹಾರ ಹಾಕಿ ಶುಭ ಹಾರೈಸಿದರು.

. . . . . . . . .

ಅಭಿನಂದನಾ ಭಾಷಣ ಮಾಡಿದ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷರಾದ ದಿನೇಶ್ ಮಾತನಾಡಿ ಗೋಕುಲ್ ದಾಸ್ ರವರು ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ,ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅಸಹಾಯಕರ, ಬಡವರ ಪರವಾಗಿ ಮಿಡಿಯುವ ಹೃದಯ ವೈಶಾಲ್ಯತೆ ಅವರದಾಗಿತ್ತು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ ಅಧಿಕಾರ, ಹಣದ ಮಧ್ಯೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿರುವುದು ಪ್ರಾಮುಖ್ಯ.ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡಿದಾಗ ನಾವು ನಿರೀಕ್ಷೆ ಮಾಡದ ರೀತಿಯಲ್ಲಿ ಬೆಳವಣಿಗೆ ಸಾಧ್ಯವಾಗುತ್ತದೆ.ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇದ್ದಾಗ ಶ್ರೇಷ್ಠ ವ್ಯಕ್ತಿಯಾಗುತ್ತಾನೆ.ಎಂದು ಹೇಳಿದರು.

ನಗರ ಪಂಚಾಯತ್ ಅಧ್ಯಕ್ಷೆ ಶ್ರೀ ಮತಿ ಶಶಿಕಲಾ ನೀರಬಿದಿರೆ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೆ.ವಿ.ಜಿ.ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ., ಮಾಜಿ ಲಯನ್ಸ್‌ ಜಿಲ್ಲಾ ರಾಜ್ಯಪಾಲ ಎಂ.ಬಿ.ಸದಾಶಿವ ಕರ್ನಾಟಕ ರಾಜ್ಯ ಮಲಿಬಾಲ್ ಅಸೊಸಿಯೇಶನ್ ಅಸೋಸಿಯೇಷನ್‌ ಸೆಕ್ರೆಟರಿ ಎನ್. ಜಯಪ್ರಕಾಶ್ ರೈ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಹರೀಶ್ ಕಂಜಿಪಿಲಿ, ಮಾಜಿ ನಗರ ಪಂಚಾಯತ್‌ ಅಧ್ಯಕ್ಷ ಎಸ್ ಸಂಶುದ್ದೀನ್ ಮಾತನಾಡಿ
ಶುಭಹಾರೈಸಿದರು.ವೇದಿಕೆಯಲ್ಲಿ ಅಭಿನಂದನಾ ಸಮಿತಿ ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಾಯಕ ಸುಭಾಸ್ ಕೇರ್ಪಳ ಪ್ರಾರ್ಥಿಸಿ ಸಾರ್ವಜನಿಕ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಅಭಿನಂದನಾ ಸಮಿತಿ ಪ್ರ.ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ವಂದಿಸಿದರು.ಲತಾ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಗೋಕುಲ್ ದಾಸ್ ಅಭಿಮಾನಿಗಳು, ಸ್ನೇಹಿತರು ಹಾರಾರ್ಪಣೆ ಮಾಡಿ ಅಭಿನಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!