ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಪರ್ಲಡ್ಕ ಜಂಕ್ಷನ್ ನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮವಾಗಿ ಸುಳ್ಯದ ಜಟ್ಟಿಪಳ್ಳದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ನಿವೃತ್ತ ಅಂಚೆ ಪಾಲಕ ಸುಳ್ಯ ಜಟ್ಟಿಪಳ್ಳದ ಅಣ್ಣು ನಾಯ್ಕ, ಅವರ ಮಗ ಚಿದಾನಂದ ನಾಯ್ಕ ಮತ್ತು ಸಂಬಂಧಿ ರಮೇಶ್ ನಾಯ್ಕ ಮೃತಪಟ್ಟವರೆಂದು ತಿಳಿದುಬಂದಿದೆ. ಈಗ ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿರುವುದಾಗಿ ತಿಳಿದುಬಂದಿದ್ದು, ಘಟನೆ ನಡೆದ ಪರ್ಲಡ್ಕದಲ್ಲಿ ಜನ ಜಮಾಯಿಸಿದ್ದಾರೆ. ಪೊಲೀಸರು ಬಂದೋಬಸ್ತ್ ಏರ್ಪಡಿಸುತ್ತಿದ್ದಾರೆ.