ಸುಬ್ರಹ್ಮಣ್ಯ : ರಿಷಿ ಸಂಸ್ಕೃತಿ ವಿದ್ಯಾ ಕೇಂದ್ರ(ರಿ.) ಸಿದ್ದ ಸಮಾಧಿ ಯೋಗ ಇವರ ವತಿಯಿಂದ ಡಿಸೆಂಬರ್ 27, 28 ಹಾಗೂ 29 ಮೂರು ದಿನಗಳ ಕಾಲ ಸುಬ್ರಹ್ಮಣ್ಯದಲ್ಲಿ ವಿಶ್ವ ಹೃದಯ ಸಮ್ಮೇಳನ ಜರಗಲಿರುವುದು. ಈ ಸಮ್ಮೇಳನಕ್ಕೆ ಮಂಗಳವಾರ ಮಂಗಳೂರಿನಿಂದ ಪಾದಯಾತ್ರೆ ಆರಂಭಗೊಂಡು ಡಿ.26 ರಂದು ಬೆಳಿಗ್ಗೆ ಏನಕಲ್ಲಿಗೆ ತಲುಪಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಾದಯಾತ್ರಿಗಳಿಗೆ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಸಿಸ್ಟೆಂಟ್ ಗವರ್ನರ್ ಶಿವರಾಮ ಯೇನೆಕಲ್, ಪೂರ್ವಾಧ್ಯಕ್ಷ ಮೈಲಪ್ಪ ಸಂಕೇಶ, ಸದಸ್ಯರಾದ ನವೀನ್ ವಾಲ್ತಾಜೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೋಟರಿ ಡಿಸ್ಟ್ರಿಕ್ಟ್ 3170 ಜಮಖಂಡಿ ರಾಮತೀರ್ಥದ ನಿರ್ದೇಶಕರಾದ ಲಕ್ಷ್ಮಿಕಾಂತ್ ರವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಅಧ್ಯಕ್ಷ ಚಂದ್ರಶೇಖರ್ ನಾಯರ್ ಅವರಿಂದ ಧ್ವಜವನ್ನು ಸ್ವೀಕರಿಸಿದರು .ಒಟ್ಟು 80 ಜನ ಪಾದಯಾತ್ರೆಗಳು ಬೆಳಗಿನ ಉಪಹಾರ ಸೇವಿಸಿ ಸುಬ್ರಹ್ಮಣ್ಯ ದತ್ತ ಪಾದಯಾತ್ರೆ ಆರಂಭಿಸಿದರು.
- Thursday
- January 9th, 2025