ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರಿಂದ ಹೊಸ ವರ್ಷ 2025ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಸುಳ್ಯ ಜಯನಗರ ಸರಕಾರಿ ಶಾಲೆ ಇರುವ “ದೃಷ್ಟಿ ಚಾರಿಟೇಬಲ್ ಟ್ರಸ್ಟ್ ” ಬಸ್ಸು ತಂಗುದಾಣ ಬಳಿ ಡಿ 26 ರಂದು ನೆರವೇರಿತು,
ಕಾರ್ಯಕ್ರಮವನ್ನು ಸುಳ್ಯ ನ. ಪಂ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಣ, ಸಾಮಾಜಿಕ ಆರೋಗ್ಯ ಇನ್ನೂ ಹಲವಾರು ಕ್ಷೇತ್ರದಲ್ಲಿ ನಿರ್ವಹಿಸುತ್ತಿರುವುದ್ದನ್ನು ಶ್ಲಾಘಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ದೃಷ್ಟಿ ಟ್ರಸ್ಟ್ ನ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಕೊಡಂಕೇರಿ ತಮ್ಮೆಲ್ಲಾ ಕಾರ್ಯಗಳಿಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮಹಾಲಕ್ಷ್ಮಿ ಕೊರಂಬಡ್ಕ, ರಾಕೇಶ್ ಕುಂಟಿಕಾನ, ನ ಪಂ ಸದಸ್ಯೆ ಶಿಲ್ಪಾ ಸುದೇವ್, ಜಯನಗರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ, ಶಿಕ್ಷಕಿಯರಾದ ವೀಣಾ, ಮಮತಾ, ಹಾಗೂ ಪತ್ರಕರ್ತರಾದ ಗಂಗಾಧರ ಮಟ್ಟಿ, ಗಂಗಾಧರ ಕಲ್ಲಪ್ಪಳ್ಳಿ, ದಯಾನಂದ ಕಲ್ನಾರ್, ಪದ್ಮನಾಭ ಆರಂಬೂರು, ಮಿಥುನ್ ಕರ್ಲಪಾಡಿ, ಸಾಹಿತಿ ಭೀಮಾರಾವ್ ವಾಷ್ಟರ್, ಸುರೇಶ್ ಕಾಮತ್, ನವೀನ್ ಮಚ್ಚಾದೋ, ಹಾಗೂ ಇನ್ನಿತರರು ಉಪಸ್ಥಿತರಿದ್ದರು, ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ದೃಷ್ಟಿ ಟ್ರಸ್ಟಿನ ಮುಖ್ಯಸ್ಥ ಹಾಗೂ ಸಿನಿಮಾ ನಿರ್ದೇಶಕ, ನಿರ್ಮಾಪಕರೂ ಆದ ಸಂತೋಷ್ ಕೊಡoಕೇರಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿದರು. ನಂತರ ಸಿಹಿ ಹಾಗೂ ಕ್ಯಾಲೆಂಡರ್ ವಿತರಣೆ ನಡೆಯಿತು.