ಅಜ್ಜಾವರ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೋಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಯುವತಿ ಗರ್ಭಿಣಿ ಯಾಗಿದ್ದು ಮನೆಯವರಿಗೆ ವಿಷಯ ಗೊತ್ತಾಗಿ ಅವರು ಪೋಲೀಸ್ ದೂರು ನೀಡಿದ್ದ ಹಿನ್ನಲೆಯಲ್ಲಿ ಡಿ.೨೬ ರಂದು ಯುವತಿಯ ಹೇಳಿಕೆ ಪಡೆದ ಪೋಲೀಸರು ಪ್ರಕರಣ ಸಂಬಂಧ ಯುವತಿ ಮನೆಯ ಬಳಿಯ ಯುವಕನೊಬ್ಬನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.