ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ಪದ್ಮನಾಭ ಹರ್ಲಡ್ಕರವರು ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದ್ದಾರೆ.
ಇಂದು (ದ.26) ನವ್ಯ ಸುಳ್ಯದ ಭವ್ಯ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನವಾಗಿದ್ದು, ಇಂದು ಇಡೀ ದಿನ ಪ್ರಯಾಣಿಕರನ್ನು ಉಚಿತವಾಗಿ ನಗರದೊಳಗಡೆ ಅವರು ಕರೆದೊಯ್ಯುತ್ತಿದ್ದಾರೆ.