ಇಂದು ಬೆಳಿಗ್ಗೆ ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಉದ್ಘಾಟನೆಗೊಂಡ ಮಯೂರಿ ಟಾಪ್ ಹೌಸ್ ರೆಸ್ಟೋಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ರವರು ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಲಕ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪ ವಿಜಯ್‌ಕುಮಾರ್ ಹಾಗೂ ಅವರ ಪುತ್ರ ತುಷಾರ್ ಗೌಡ ರವರು ದರ್ಮದರ್ಷಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್, ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸಯ್ಯದ್ ಮತ್ತು ಝೀ ಟಿವಿ ವಾಹಿನಿಯ ಸಹ ಸಂಯೋಜಕ ಸಚಿನ್ ಇವರು ಭಾಗಿಯಾಗಿದ್ದರು.