ಸೆಲ್ಸಿ ಪಾಯಿಂಟ್, ವೀವ್ ಪಾಯಿಂಟ್ ಆಧುನಿಕ ಸ್ಪರ್ಶತೆ ಇಲ್ಲಿನ ವಿಶೇಷತೆ
ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಕಳೆದ 21 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿರುವ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪವಿಜಯ್ ಕುಮಾರ್ ರವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ರವರ ನೂತನ ಮಯೂರಿ ಟೋಪ್ ಹೌಸ್ ರೆಸ್ಟೋ ಡಿ.ಎಂ.ಕಾಂಪ್ಲೆಕ್ಸ್ ರೂಫ್ ಗಾರ್ಡನ್ ನಲ್ಲಿ ಡಿ.25ರಂದು ಶುಭಾರಂಭಗೊಂಡಿದೆ.
ಸುಳ್ಯವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ, ನ್ಯಾಯವಾದಿ ನಾರಾಯಣ ಕೆ ಸುಳ್ಯ, ನಂದಾ ಸ್ಟೋರ್ಸ್ ಮಾಲಕ ಸದಾನಂದ ಕೆ.ಸಿ, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಹಿತೇಶ್ ಕಾಪಿನಡ್ಕ ಭಾರತ್ ಮೆಡಿಕಲ್ಸ್ ನ ಪ್ರಭಾಕರ್ ಬಿ.ಪಿ ಮಯೂರಿ, ಝೀ ಕನ್ನಡ ಖ್ಯಾತಿಯ ಸಚಿನ್ ಪ್ರಕಾಶ್,ಸರಿಗಮಪ ಖ್ಯಾತಿಯ ಸುಹಾನ ಸೈಯದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ನಟ ತುಷಾರ್ ಗೌಡ ಸ್ವಾಗತಿಸಿದರು. ಮಾಲಕರಾದ ವಿಜಯ್ ಕುಮಾರ್ ಮಯೂರಿ ವಂದಿಸಿದರು. ಕೆ.ವಿ.ಜಿ ಉದ್ಯೋಗಿ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಝೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯ್ಯದ್ ರವರು ಸೋಜುಗದ ಸೂಜಿ ಮಲ್ಲಿಗೆ ಹಾಡಿನ ಮೂಲಕ ಮತ್ತು ಕಲಾವಿದ ಹಿತೇಶ್ ಕಾಪಿನಡ್ಕ ಪ್ಯಾಕ್ ಪ್ಯಾಕ್ ಮಿಮಿಕ್ರಿ ಯೊಂದಿಗೆ ನೆರದ ಸದಸ್ಯರನ್ನು ರಂಜಿಸಿದರು.
ಟೋಪ್ ಹೌಸ್ ವಿಶೇಷತೆ:
ಸುಳ್ಯದಲ್ಲಿ ಪ್ರಥಮ ಬಾರಿಗೆ ಆಧುನಿಕತೆಯ ಸ್ಪರ್ಶದೊಂದಿಗೆ ಆಕರ್ಷಕ ಆರಾಮದಾಯಕ ಆಸನದ ವ್ಯವಸ್ಥೆ ಯೊಂದಿಗೆ ಗೆಳೆಯರ ಜತೆ ಫ್ಯಾಮಿಲಿಯೊಂದಿಗೆ ಕುಳಿತು ಶುಚಿ ರುಚಿಯಾದ ಆಹಾರ ಖಾದ್ಯಗಳನ್ನು ಸವಿಯಲು ಹಾಗೂ ಹುಟ್ಟು ಹಬ್ಬ ಮುಂತಾದ ಪಾರ್ಟಿ ಗಳನ್ನು ಮಾಡುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳೊಂದಿಗೆ ಈಗಾಗಲೇ ರೂಫ್ ಗಾರ್ಡನ್ ಸಿದ್ಧಗೊಂಡಿದೆ. ಗೆಳೆಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಿಗ್ ಬಾಸ್ ಲೋಗೋ, ಕಂಬಳದ ಕೋಣಗಳು ಸೆಲ್ಸಿ ಪಾಯಿಂಟ್ ಹಾಗೂ ಸುಂದರವಾದ ವೀವ್ ಪಾಯಿಂಟ್ ಹಾಗೂ ಕ್ರಿಕೆಟ್ ಪಂದ್ಯಾಟ ಹಾಗೂ ಚಲನಚಿತ್ರ ಧಾರವಾಹಿ ವೀಕ್ಷಿಸಲು ಬೃಹತ್ ಗಾತ್ರದ ಪರದೆ ಅಳವಡಿಸಿರುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ