ಸುಳ್ಯ : ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕಾರ್ಯ ನಡೆಯುತ್ತಿದ್ದು ರಥಬೀದಿಯು ಧೂಳುಮಯವಾಗಿ ಅಮರ ಸುದ್ದಿ ವರದಿ ಬೆನ್ನಲ್ಲೇ ಎಚ್ಚೆತ್ತ ಆಡಳಿತವು ತಕ್ಷಣ ಸ್ಪಂದನೆ ನೀಡಿ ಇಂಟರ್ ಲಾಕ್ ಅಳವಡಿಕೆ ಮತ್ತು ನೀರು ಹಾಯಿಸುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೆ ಇದೀಗ ಆಲೆಟ್ಟಿ ಮಿತ್ತೂರಿನ ರೋಟರಿ ಶಾಲೆಯಲ್ಲಿ ಹನಿಹನಿ ನೀರಿಗೂ ಕೊರತೆಯಾಗಿದ್ದು ಹೈ ಸ್ಕೂಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ವಾಶ್ ರೂಮ್ ಗೆ ತೆರಳಲು ನೀರಿನ ಕೊರತೆ ಎದುರಾಗಿದೆ. ಇದು ಪೋಷಕರ ಗಮನಕ್ಕೆ ವಿದ್ಯಾರ್ಥಿನಿಯರು ತಂದಿದ್ದಾರೆ.
ನೀರಿನ ಕೊರತೆ ವಿಚಾರದ ಬಗ್ಗೆ ರೋಟರಿ ಅಧ್ಯಕ್ಷರಾದ ಯೋಗೀತಾ ಗೋಪಿನಾಥ್ ರವರನ್ನು ಸಂಪರ್ಕಿಸಿದಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಳ್ಳಿಯು ಮುರಿದಿರುವುದಾಗಿ ತಿಳಿಸಿದ್ದರು. ಅದನ್ನು ಸರಿಪಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.