ಮಹಾವಿಷ್ಣು ಸ್ರ್ತೀ ಶಕ್ತಿ ಗೊಂಚಲು ಸಭೆಯಲ್ಲಿ ಮಂಡೆಕೋಲು ಗ್ರಂಥಾಲಯದ ವತಿಯಿಂದ ಡಿಜಿಟಲ್ ಸಾಕ್ಷರತಾ ತರಬೇತಿ ಮತ್ತು ಮಾಹಿತಿ ಸಂಗ್ರಹ ಕಾರ್ಯಗಾರವು ಮಂಡೆಕೋಲಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ. ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷರಾದ ಸರೋಜಿನಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ,ಕಾರ್ಯದರ್ಶಿ ರೇಷ್ಮಾ, ಅಂಗನವಾಡಿ ಕಾರ್ಯಕರ್ತೆ ರಾಜೀವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಗೊಂಚಲಿನ ಸದಸ್ಯರು ಡಿಜಿಟಲ್ ಸಾಕ್ಷರತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂಧರ್ಭದಲ್ಲಿ ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಸದಸ್ಯರ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಗೊಂಚಲುಗಳಿಗೆ ಭೇಟಿ ನೀಡಿ ಮಾಹಿತಿ ನೀಡಬೇಕೆಂದು ಕೋರಿಕೊಂಡರು.
ಡಿಜಿಟಲ್ ಸಾಕ್ಷರತೆ ಕುರಿತು ನಿಮಿಗೆಷ್ಟು ಗೊತ್ತು ಹಾಗಿದ್ದರೆ ಈ ವರದಿಯನ್ನು ಓದಿರಿ.
ಡಿಜಿಟಲ್ ಸಾಕ್ಷರತೆ ತರಬೇತಿ ಉದ್ದೇಶವು ಸಮುದಾಯ ಮತ್ತು ಸ್ವ-ಸಹಾಯ ಸಂಘದ ಮಹಿಳೆಯರು ಸಂವಹನ ಮಾಡಲು, ಮಾಹಿತಿಯನ್ನು ಬಳಕೆ ಮಾಡಲು, ವ್ಯವಹಾರ ನಡೆಸಲು ಹಾಗೂ ಸರಳ ಡಿಜಿಟಲ್ ವಹಿವಾಟುಗಳಿಗಾಗಿ ಸ್ಟಾರ್ಟ್ ಫೋನ್ ಗಳಂತಹ ಡಿಜಿಟಲ್ ಸಾಧನಗಳನ್ನು ಆತ್ಮವಿಶ್ವಾಸದಿಂದ ಬಳಸಲು ಅಗತ್ಯವಿರುವ ಕೌಶಲ್ಯಗಳನ್ನು ವೃದ್ಧಿಸುವುದು.
ಕಾರ್ಯಕ್ರಮದ ಪ್ರಯೋಜನಗಳು –
ಡಿಜಿಟಲ್ ಮಾಹಿತಿಯನ್ನು ಪಡೆದುಕೊಳ್ಳಲು ಸಹಕಾರಿ ,ಡಿಜಿಟಲ್ ಆರ್ಥಿಕತೆಯಲ್ಲಿ ಜನರನ್ನು ಸಶಕ್ತಗೊಳಿಸಲು ಹಾಗೂ ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ , ಮೊಬೈಲ್ ಬ್ಯಾಂಕಿಂಗ್ ನಂತಹ ಡಿಜಿಟಲ್ ಪಾವತಿಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ
ಹೇಗಿದೆ ಕಾರ್ಯಕ್ರಮದ ರೂಪುರೇಷೆ –
ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಭಾಗವಾಗಿ RDPR ಇವರ ಸಹಕಾರದೊಂದಿಗೆ ಕರ್ನಾಟಕ ರಾಜ್ಯಾದ್ಯಂತ -5000 ಅರಿವು ಕೇಂದ್ರಗಳಲ್ಲಿ ತರಬೇತಿಯ ಅನುಷ್ಠಾನ ಮಾಡಲಾಗುತ್ತದೆ ,ರಾಜ್ಯಾದ್ಯಂತ 6 ಲಕ್ಷ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ 2 ಲಕ್ಷ ಸಮುದಾಯದವರನ್ನು ಒಳಗೊಂಡಂತೆ ಒಟ್ಟು 8 ಲಕ್ಷ ಜನರನ್ನು ತಲುಪಲಿದ್ದು. ಸ್ಮಾರ್ಟ್ ಪೋನ್ ಬಳಕೆಯ ಮೂಲಭೂತ ಅಂಶಗಳು ಹುಡುಕಾಟ(ಸರ್ಚ್)ಮತ್ತು ಇಂಟರ್ನೆಟ್ ಸುರಕ್ಷತೆ ಡಿಜಿಟಲ್ ಪಾವತಿಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ.
ಅನುಷ್ಠಾನ ಪ್ರಕ್ರಿಯೆ:
ಗ್ರಾಮ ಪಂಚಾಯತ್ ಸ್ವಚ್ಛತಾ ವಾಹಿನಿ ಅಥವಾ ವಾಟ್ಸಾಪ್ ಮೂಲಕ ಡಿಜಿಟಲ್ ಸಾಕ್ಷರತೆ ತರಬೇತಿ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅಲ್ಲದೇ ಗ್ರಾಮ ಪಂಚಾಯತ್ ಅಥವಾ ಇತರೆ ಸ್ಥಳಗಳಲ್ಲಿ ಸಭೆಗಳು ನಡೆಯುವಾಗ ಶಿಕ್ಷಣ ಫೌಂಡೇಶನ್ ನೀಡಿರುವ ಡಿಜಿಟಲ್ ಸಾಕ್ಷರತೆ ವೀಡಿಯೊವನ್ನು ಬಳಸಿ ಡಿಜಿಟಲ್ ಕೌಶಲ್ಯಗಳ ಪ್ರಯೋಜನಗಳನ್ನು ತಿಳಿಸುವುದಾಗಿದೆ ಅಲ್ಲದೇ ತರಬೇತಿಗಾಗಿ ಕನಿಷ್ಠ 120 ಸ್ವ-ಸಹಾಯ ಸಂಘದ ಮಹಿಳೆಯರು ಮತ್ತು 40 ಸಮುದಾಯದ ಸದಸ್ಯರನ್ನು ಗುರುತಿಸಿ (ಗುರುತಿಸಲು ಹಾಗೂ ಶಿಭಿರಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಎಮ್ ಐ ಕೆ, ಕೃಷಿ ಸಖ, ಪಶು ಸಖ, ಬಿ ಸಿ ಸಖ ಮತ್ತು ಇತರರ ಸಹಕಾರವನ್ನು ಪಡೆದುಕೊಳ್ಳ ಬಹುದಾಗಿದೆ.
ಸ್ವ-ಸಹಾಯ ಸಂಘದ ಸದಸ್ಯರಿಗೆ ತರಬೇತಿಯ ವೇಳಾಪಟ್ಟಿಯನ್ನು ತಯಾರಿಸಿ ಹಾಗೂ ವೇಳಾಪಟ್ಟಿಗೆ ಬದ್ಧರಾಗಿ ಕೆಲಸ ನಿರ್ವಹಿಸುವುದು ,ತರಬೇತಿ ನಡೆಸಲು ಸೂಕ್ತವಾದ ಸ್ಥಳಗಳನ್ನು ಆಯ್ಕೆ ಮಾಡಿ (ಸಮುದಾಯ ಕೇಂದ್ರಗಳು, ಅರಿವು ಕೇಂದ್ರ ಇತ್ಯಾದಿ).,ಗ್ರಾ.ಪಂ ಪಿ.ಡಿ.ಒ ರವರು ತರಬೇತಿಗೆ ಅಗತ್ಯವಿರುವ ಮೂಲ ಸೌಕರ್ಯ ಮತ್ತು ಸಹಕಾರವನ್ನು ಒದಗಿಸುವುದು
ಸಂಪನ್ಮೂಲಗಳ ವ್ಯವಸ್ಥೆಗಳನ್ನು ಖಾತ್ರಿ ಪಡಿಸುವುದು ಕಡ್ಡಾಯ.
ಟಿವಿ/ ಪ್ರೊಜೆಕ್ಟರ್/ಮಾನಿಟರ್
ಲ್ಯಾಪ್ ಟಾಪ್/ ಕಂಪ್ಯೂಟರ್/ ಡೆಸ್ಕ್ ಟಾಪ್/ ಕ್ರೋಮ್ ಬುಕ್ , ಸ್ಪೀಕರ್ಸ್ ಲಭ್ಯವಿದ್ದಲ್ಲಿ ಇಂಟರ್ನೆಟ್ ಕನೆಕ್ಷನ್
ಅರಿವು ಕೇಂದ್ರಗಳಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್
ಶಿಬಿರಾರ್ಥಿಗಳ ಬಳಿ ಫೋನ್ ಲಭ್ಯವಿದ್ದಲ್ಲಿ ತರಬೇತಿಗೆ ಭಾಗವಹಿಸಬಹುದು.
ತರಬೇತಿಯ ಅಧಿವೇಶನಗಳ ಆಯೋಜನೆ
ವಿಷಯದ ಬಗ್ಗೆ ನೀವು ಸ್ಪಷ್ಟತೆ ಹೊಂದುವವರೆಗು 2 ರಿಂದ 5 ಜನರ ಶಿಬಿರಾರ್ಥಿಗಳಿಗೆ ಕನಿಷ್ಟ 3 ಗುಂಪುಗಳಾಗಿ ತರಬೇತಿಯನ್ನು ನೀಡಿ , ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಬಂದ ನಂತರ 15-20 ಶಿಬಿರಾರ್ಥಿಗಳಿಗೆ ತರಬೇತಿಯನ್ನು ಆಯೋಜಿಸಿ , ಸ್ವಯಂ ಸೇವಕರನ್ನು (MBK, ಯುವಕರು, ಸ್ವಸಹಾಯ ಸಂಘದ ಸದಸ್ಯರು) ತರಬೇತುದಾರರಾಗಿ ತೊಡಗಿಸಿಕೊಳ್ಳಬಹುದು
ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ತರಬೇತಿಯ ನಂತರ ಅಂಕಿ ಅಂಶಗಳನ್ನು ಶಿಕ್ಷಣ ಫೌಂಡೇಶನ್ ಒದಗಿಸಿರುವ ಲೈಬ್ರರಿಯನ್ ಪೋರ್ಟಲ್ ಹಾಗೂ ಮೈ ಜಿ ಪಿ ಅಪ್ಲಿಕೇಶನ್ ನಲ್ಲಿ ನಮೂದಿಸುವುದು, ಅಲ್ಲದೇ ತರಬೇತಿ ನಡೆಯುವ ಸಂದರ್ಭಗಳಲ್ಲಿ ಪಿ.ಡಿ.ಒ ರವರು ಭೇಟಿ ನೀಡಿ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡುವುದು ಎಂದು ಉಮಾ ಮಹಾದೇವನ್, ಭಾ.ಆ.ಸೇ..ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಂಚಾಯತ್ ರಾಜ್ ಆದೇಶದಲ್ಲಿ ತಿಳಿಸಿದ್ದಾರೆ.