ಸಂಪಾಜೆಯ ಚೆಡಾವು ಬಳಿ ಕಂಟೈನರ್ ಸ್ಕೂಟಿಗೆ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸಿದ್ಧಾಪುರದಿಂದ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಸಂಪಾಜೆ ಕೊಯನಾಡಿನ ಚೆಡಾವು ಬಳಿ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟರೇ ಗಂಭೀರ ಗಾಯಗೊಂಡ ಸಹಸವಾರೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ.
ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದುಕೇರಿ ಎಂ. ಚಿದಾನಂದ ಆಚಾರ್ಯ ಮೃತಪಟ್ಟ ವ್ಯಕ್ತಿ. ಅವರು ಪುತ್ತೂರಿಗೆ ತೆರಳುವವರಾಗಿದ್ದು ಮಗಳನ್ನು ಬಸ್ಸಿನಲ್ಲಿ ಕಳುಹಿಸಿದ್ದರೆನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.