ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಸುಳ್ಯ ಚೆನ್ನಕೇಶವ ದೇವರಿಗೆ ಬ್ರಹ್ಮರಥ ಕೊಡುಗೆಯಾಗಿ ನೀಡುತ್ತಿದ್ದು,
ಡಿ.23 ರಂದು ನೂತನ ಬ್ರಹ್ಮರಥಕ್ಕೆ ರಥಪೂಜೆ ನಡೆಯಿತು. ಇಂದು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕುಂಭಾಶಿಯಿಂದ ಬ್ರಹ್ಮರಥ ಸುಳ್ಯದತ್ತ ಹೊರಟಿದೆ.
ಇಂದು ಸಂಜೆ ಪುತ್ತೂರು ತಲುಪಲಿರುವ ಬ್ರಹ್ಮರಥ, ನಾಳೆ ಮಧ್ಯಾಹ್ನ ದ ವೇಳೆಗೆ ಜಾಲ್ಸೂರು ತಲುಪಲಿದೆ. ಅಲ್ಲಿಂದ ವಾಹನ ಜಾಥದೊಂದಿಗೆ ಆಗಮಿಸುವ ರಥಕ್ಕೆ ಸುಳ್ಯದ ಜ್ಯೋತಿ ಸರ್ಕಲ್ ಬಳಿ ಅದ್ದೂರಿ ಸ್ವಾಗತದ ಬಳಿಕ ಸಾವಿರಾರು ಮಂದಿಯ ಕೂಡುವಿಕೆಯೊಂದಿಗೆ ಬ್ರಹ್ಮರಥವನ್ನು ಸುಳ್ಯ ಚೆನ್ನಕೇಶವ ದೇವಳದ ವಠಾರಕ್ಕೆ ಆಗಮಿಸಲಿದೆ.