Ad Widget

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯ -ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 22.12.2024ರಂದು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಕೆವಿಜಿ ಆಯುರ್ವೇದ ಫಾರ್ಮ ಹಾಗೂ ರಿಸರ್ಚ್ ಸೆಂಟರಿನ ಆಡಿಟೋರಿಯಂ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಆಯುರ್ವೇದ ಅಲುಮ್ನಿ ಅಸೋಸಿಯೇಷನ್ನಿನ ಅಧ್ಯಕ್ಷರಾದ ಡಾ. ಗುರುಪ್ರಸಾದ್ ಅಗ್ಗಿತ್ತಾಯ ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಅಲುಮ್ನಿ ಅಸೋಸಿಯೇಷನ್ನಿನ ಗುರಿ ಹಾಗೂ ಉದ್ದೇಶಗಳನ್ನು ಅಲ್ಲಿ ನೆರೆದ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಗೌರವ ಅತಿಥಿಗಳಾಗಿ 1997-98 ಸಾಲಿನ ವಿದ್ಯಾರ್ಥಿಯಾದ ಶ್ರೀ ಅಖಿಲ ರವಿ ಮೈಕ್ರೋ ಇಂಡಸ್ಟ್ರೀಸ್ ಇದರ ಮುಖ್ಯಸ್ಥರಾದ ಡಾ. ರಾಜಾರಾಮ್ ಎ ಆರ್, 2001-06 ಸಾಲಿನ ವಿದ್ಯಾರ್ಥಿಯಾದ ಎಂ.ವಿ.ಆರ್ ಆಯುರ್ವೇದ ಮೆಡಿಕಲ್ ಕಾಲೇಜು ಪರಶ್ಶಿನಿಕಡವು ಕಣ್ಣೂರು ಕೇರಳ ಇದರ ಉಪ ಪ್ರಾಂಶುಪಾಲರಾದ ಡಾ. ಶೈಜು ಕೃಷ್ಣನ್ ಪಿ ಅವರು ಹಾಗೂ 1996-97 ಸಾಲಿನ ವಿದ್ಯಾರ್ಥಿಯಾದ ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ಉಪಸ್ಥಿತರಿದ್ದು, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮವು ನಡೆಯುತ್ತಿರಲಿ ಎಂದು ಆಶಿಸುತ್ತಾ ಸಮ್ಮಿಲನಕ್ಕೆ ಆಗಮಿಸಿದ ಹಳೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು .
ಕಾರ್ಯಕ್ರಮವನ್ನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಪ್ರಸ್ತುತ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ವೇದಿಕೆಯಲ್ಲಿ ಕೆವಿಜಿ ಆಯುರ್ವೇದ ಅಲುಮ್ನಿ ಅಸೋಸಿಯೇಷನ್ನಿನ ಕಾರ್ಯದರ್ಶಿಯಾದ ಡಾ. ಅವಿನಾಶ್ ಕೆ ವಿ, ಖಜಾಂಜಿಯಾದ ಡಾ. ವಿನಯ್ ಶಂಕರ್ ಭಾರದ್ವಾಜ್ ಹಾಗೂ ಈ ಸಮ್ಮಿಲನದ ಸಂಚಾಲಕರಾದ ಡಾ. ಹರ್ಷಿತ ಎಂ ಇವರು ಉಪಸ್ಥಿತರಿದ್ದರು.
ಗೌರವ ಅತಿಥಿಗಳಾಗಿ ಆಗಮಿಸಿದ ಡಾ. ರಾಜಾರಾಮ್ ಎ ಆರ್ ಹಾಗೂ ಡಾ. ಶೈಜು ಕೃಷ್ಣನ್ ಪಿ ಇವರನ್ನು ಅಲುಮ್ನಿ ಅಸೋಸಿಯೇಷನ್ನಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯದರ್ಶಿಯಾದ ಡಾ. ಅವಿನಾಶ್ ಕೆ ವಿ ಇವರು 2024-25 ಸಾಲಿನ ಅಲುಮ್ನಿ ಅಸೋಸಿಯೇಷನ್ನಿನ ವಾರ್ಷಿಕ ವರದಿಯನ್ನು ವಚಿಸಿದರು.
ಸಮ್ಮಿಲನಕ್ಕೆ ಆಗಮಿಸಿದ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಯಾದ ಡಾ. ಸ್ಮಿತಾ ತಂಬನ್ ಪ್ರಾರ್ಥಿಸಿ, ಡಾ. ಹರ್ಷಿತಾ ಎಂ ಸ್ವಾಗತಿಸಿ, ಡಾ. ವಿನಯ್ ಶಂಕರ್ ಭಾರದ್ವಾಜ್ ವಂದಿಸಿ, ಡಾ. ಪ್ರಜಿತಾ ಜಿ ಹಾಗೂ ಡಾ. ನಿಲೋಫರ್ ತಹನಿ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading