ಪೆರಾಜೆ ವಿಷ ಸೇವಿಸಿ ವೃದ್ದೆ ಆತ್ಮಹತ್ಯೆವೃದ್ದೆ ಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಾಜೆ ಗ್ರಾಮದ ನೆಡ್ಚಿಲ್ ನಿಂದ ವರದಿಯಾಗಿದೆಪೆರಾಜೆ ಗ್ರಾಮದ ನೆಡ್ಚಿಲ್ ದಿ. ರಾಮಣ್ಣ ರವರ ಪತ್ನಿ ಕೇಪಕ್ಕನವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.ಇವರು ಪುತ್ರರಾದ ಗಣೇಶ, ಚಂದ್ರಶೇಖರ, ದಯಾನಂದ ಪುತ್ರಿಯರಾದ ಹೇಮಾವತಿ, ತೇಜವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರಿಗೆ 72 ವರ್ಷ ವಯಸ್ಸಾಗಿತ್ತು.
- Wednesday
- January 8th, 2025