
ಪೀಸ್ ಸ್ಕೂಲ್ ಬೊಳುಬೈಲು ಹಾಗೂ ಅಗ್ನಿಶಾಮಕ ದಳ, ಸುಳ್ಯ ಇವರ ವತಿಯಿಂದ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ಹಾಗೂ ಮಾಹಿತಿ ಕಾರ್ಯಾಗಾರವು ಇಂದು ಪೀಸ್ ಸ್ಕೂಲ್ ಬೊಳುಬೈಲು ಇದರ ವಠಾರದಲ್ಲಿ ನಡೆಯಿತು.
ಸುಳ್ಯ ಅಗ್ನಿಶಾಮಕ ಠಾಣೆಯ ನಾಗರಾಜ್ ಪೂಜಾರಿ ರವರು ಅಗ್ನಿ ಸುರಕ್ಷತಾ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ವಿವಿಧ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾತಕ್ಷಿಕತೆಯ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೀಸ್ ಸ್ಕೂಲಿನ ಟ್ರಸ್ಟಿಯಾದ ಸಂಶುದ್ದೀನ್, ಬೊಳುಬೈಲ್, ಅಬ್ದುಲ್ ಗಫೂರ್
ಅಗ್ನಿ ಶಾಮಕ ಸಿಬ್ಬಂದಿಗಳಾದ ಆನಂದ್, ರಾಜೇಶ್, ರಾಜೇಶ್ ಎಸ್ ಕೆ. ಮೋಹನ್ ಬಾಬು ಶಾಲೆಯ ಮುಖ್ಯೋಪಾಧ್ಯಯರಾದ ಮುಹಮ್ಮದ್ ಸೈಫುಲ್ಲಾ
ಹಸೈನಾರ್, ಶಿಕ್ಷಕರು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.